Ramanagara : ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಬಳಿಯ ಕುರುಬರಹಳ್ಳಿದೊಡ್ಡಿಯ ತಾಯಮ್ಮ ಫಾರಂ ಹೌಸ್ ನಲ್ಲಿ ರಾಮನಗರ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳ ಸಂಘದ ವತಿಯಿಂದ ಡೇರಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಕಾರ್ಯ ನಿರ್ವಾಹಕರುಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಮೂಲ್ ನಿರ್ದೇಶಕ ಪಿ.ನಾಗರಾಜು “ಸಂಘವನ್ನು ನಂಬಿಕೊಂಡು ನೌಕರರು ಮಾತ್ರವಲ್ಲ ನೂರಾರು ರೈತ ಕುಟುಂಬಗಳು ಜೀವನ ನಡೆಸುತ್ತಿವೆ ಸಂಘದ ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿ ರೈತರಿಗೆ ಆರ್ಥಿಕ ನೆರವು ನೀಡಲು ಶ್ರಮಿಸಬೇಕು. ಈಗ ರೈತರಿಗೆ ಮಾವು ಮತ್ತು ತೆಂಗು ಹೊಡೆತ ನೀಡಿದ್ದು ನೆರೆಯ ರಾಜ್ಯಗಳಲ್ಲಿ ಲೀಟರ್ ಹಾಲು ₹47 ರಿಂದ 50ಕ್ಕೆ ಮಾರಾಟವಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ದರ ಹೆಚ್ಚಳ ಮಾಡಲು ಆಗಿಲ್ಲ. ಸರ್ಕಾರದ ಮಟ್ಟದಲ್ಲಿ ನಿಂತು ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸುವವರೇ ಇಲ್ಲ” ಎಂದು ಹೇಳಿದರು.
ವಿವಿಧ ಸಂಘಗಳ ಮುಖ್ಯಕಾರ್ಯನಿರ್ವಾಹಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ನಾಗೇಶ್, ಶಿವಕುಮಾರ್, ವೆಂಕಟಾಚಲಯ್ಯ, ಪುಟ್ಟಸ್ವಾಮಯ್ಯ, ಶಿವರಾಜು, ಅಪ್ಪಾಜಿ, ಶಿವಣ್ಣ, ಶ್ರೀನಿವಾಸರೆಡ್ಡಿ, ವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು.
ಬಮೂಲ್ ರಾಮನಗರ ಶಿಬಿರ ಉಪ ವ್ಯವಸ್ಥಾಪಕ ಜಿ.ಟಿ. ಗಣೇಶ್, ಸಹಾಯಕ ವ್ಯವಸ್ಥಾಪಕ ಡಾ. ಅಜಯ್‍ಕುಮಾರ್, ಮುಖಂಡ ಬಿಡದಿ ಹೊನ್ನಶೆಟ್ಟಿ ರಾಜಣ್ಣ, ವಿಸ್ತರಣಾಧಿಕಾರಿಗಳಾದ ವೆಂಕಟೇಶ್, ಕವಿತಾ, ಕುಮಾರ್, ಅನಿತಾ, ಯತೀಶ್, ಸಂಘದ ಅಧ್ಯಕ್ಷ ವೀರಭದ್ರಯ್ಯ, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಪ್ರಭಾಕರ್ ಮುಖ್ಯ ಕಾರ್ಯನಿರ್ವಾಹಕರಾದ ಪ್ರಕಾಶ್, ಸತೀಶ್, ದಿವಾಕರ್, ಮಹದೇವ್, ಅರ್ಕೇಶ್, ಯೋಗಾನಂದ್, ದಿನೇಶ್, ಮಂಚೇಗೌಡ, ಕುಮಾರ್, ಮನು, ಪುಟ್ಟಸ್ವಾಮಯ್ಯ, ಮಹೇಶ್, ಶಿವಣ್ಣ, ಮೋಹನ, ರಾಜು, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.