Mumbai: 2025ರ ಟ್ರಾವೆಲ್ ಅಂಡ್ ಟೂರಿಸಂ ಫೇರ್‌ನಲ್ಲಿ ರಾಮೋಜಿ ಗ್ರೂಪ್ (Ramoji Group) ಮತ್ತೆ ‘ಅತ್ಯುತ್ತಮ ಬೂತ್ ಅಲಂಕಾರ’ ಪ್ರಶಸ್ತಿ ಪಡೆದಿದೆ. ಇದೇ ಪ್ರಶಸ್ತಿಯನ್ನು ಕಳೆದ ಜುಲೈನಲ್ಲಿ ಕೋಲ್ಕತ್ತಾದಲ್ಲಿ ನಡೆದ ಮೇಳದಲ್ಲೂ ಗೆದ್ದಿತ್ತು.
ಮುಂಬೈ ಮೇಳದಲ್ಲಿ ರಾಮೋಜಿ ಗ್ರೂಪ್ ನ ಸುಂದರವಾಗಿ ಅಲಂಕರಿಸಿದ ಬೂತ್ ಎಲ್ಲರ ಗಮನ ಸೆಳೆದಿತು. ಹೈದರಾಬಾದ್‌ನ ಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿ ಪ್ರವಾಸಿ ಆಕರ್ಷಣೆಗಳ ಮಾಹಿತಿ, ಆಕರ್ಷಕ ಮಳಿಗೆಗಳು, ಕರಪತ್ರಗಳು, ಎಲ್ಇಡಿ ಪರದೆಗಳಲ್ಲಿ ವೀಡಿಯೊಗಳು ಪ್ರದರ್ಶಿಸಲಾಯಿತು.
ಮೂರು ದಿನ ನಡೆದ ಮೇಳದಲ್ಲಿ ಸಾವಿರಾರು ಜನರು ಬೂತ್‌ಗೆ ಭೇಟಿ ನೀಡಿದರು. ರಾಮೋಜಿ ಗ್ರೂಪ್‌ನ ಮೋಬಿನ್ ಮೇಘರಾಜ್ ಅವರು ‘ಬಾಹುಬಲಿ’ ಸೇರಿದಂತೆ ಹಲವಾರು ಸಿನಿಮಾಗಳ ಚಿತ್ರೀಕರಣ ಸ್ಥಳಗಳು ಹಾಗೂ ಫಿಲ್ಮ್ ಸಿಟಿಯ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಮೇಳದಲ್ಲಿ ‘ಸಾಹಸ್’ ಎಂಬ ಸಾಹಸ ಚಟುವಟಿಕೆ ಪ್ರದೇಶವನ್ನೂ ಪರಿಚಯಿಸಲಾಯಿತು. ಇಲ್ಲಿ ಹೈ ರೋಪ್ ಕೋರ್ಸ್, ಎಟಿವಿ ಟ್ರ್ಯಾಕ್, ರೋಲರ್ ಝೋರ್ಬ್, ಪೇಂಟ್ಬಾಲ್, ಬಂಗೀ ಜಂಪಿಂಗ್, ಬಿಲ್ಲುಗಾರಿಕೆ ಸೇರಿದಂತೆ 40ಕ್ಕೂ ಹೆಚ್ಚು ಸಾಹಸ ಆಟಗಳಿವೆ. ಮಕ್ಕಳಿಗಾಗಿ ವಿಶೇಷ ಚಟುವಟಿಕೆಗಳ ವ್ಯವಸ್ಥೆಯೂ ಇದೆ.
ಈ ಮೇಳದಲ್ಲಿ 100ಕ್ಕೂ ಹೆಚ್ಚು ದೇಶಗಳು, ಭಾರತದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಶ್ರೀಲಂಕಾ, ಸಿಂಗಾಪುರ, ಮಾಲ್ಡೀವ್ಸ್, ನೇಪಾಳ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಹಾಜರಿದ್ದರು.