ಬೆಂಗಳೂರು: 2025 ರಣಜಿ ಟ್ರೋಫಿ ಕ್ರಿಕೆಟ್ (Ranji Trophy 2025) ಟೂರ್ನಿಯ ಕರ್ನಾಟಕ ಮತ್ತು ಹರಿಯಾಣ ನಡುವಿನ ಪಂದ್ಯ ಚಿನ್ನಸ್ಚಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಇದು ನೀರಸ ಡ್ರಾನಲ್ಲಿ ಮುಕ್ತಾಯವಾಗಿದೆ. ಈ ಮೂಲಕ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್‌ರೇಸಿನಿಂದ ಹೊರಬಿದ್ದಿದ್ದು, ಟೂರ್ನಿಯಿಂದ ಅದರ ಅಭಿಯಾನ ಮುಗಿಸಿದೆ.
ಹರಿಯಾಣ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 3 ಅಂಕಗಳನ್ನು ಗಳಿಸಿ ‘ಸಿ’ ಗ್ರೂಪ್‌ನ ಅಗ್ರಸ್ಥಾನದಲ್ಲಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ 146 ರನ್ ಗಳ ಹಿನ್ನಡೆಯೊಂದಿಗೆ ಆರಂಭಿಸಿದ ಕರ್ನಾಟಕ ತಂಡವು 3ನೇ ದಿನದಾಟದ ಅಂತ್ಯದಲ್ಲಿ 3 ವಿಕೆಟ್‌ಗಳಿಗೆ 108 ರನ್ ಗಳಿಸಿತು. 4ನೇ ದಿನದಾಟದಲ್ಲಿ ದೇವದತ್ ಪಡಿಕ್ಕಲ್ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಮರಣ್ ರವಿಚಂದ್ರನ್ ಹಾಗೂ ಹಾರ್ದಿಕ್ ರಾಜ್ 98 ರನ್ ಗಳ ಜೋಡಿಯಿಂದ ಪ್ರತಿರೋಧವನ್ನು ತೋರಿಸಿದರು.
ಸ್ಮರಣ್ ರವಿಚಂದ್ರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಶತಕ ಹೊತ್ತ ಮಿಂಚು ಪ್ರದರ್ಶನ ನೀಡಿದರು. ಅಂತಿಮವಾಗಿ, 8 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿ ಕರ್ನಾಟಕ ತಂಡ ಡಿಕ್ಲೇರ್ ಘೋಷಿಸಿತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನ್ನಿಂಗ್ಸ್: 304/10
ಹರಿಯಾಣ ಮೊದಲ ಇನ್ನಿಂಗ್ಸ್: 450/10
ಕರ್ನಾಟಕ ದ್ವಿತೀಯ ಇನ್ನಿಂಗ್ಸ್: 294/8 (ಸ್ಮರಣ್ ರವಿಚಂದ್ರನ್ 133)
ದೇವದತ್ ಪಡಿಕ್ಕಲ್: 43
ಅಂಶುಲ್ ಕಾಂಭೋಜ್: 3 ವಿಕೆಟ್ (16-40-3)
ಜಯಂತ್ ಯಾದವ್: 2 ವಿಕೆಟ್ (27-62-2)
ಪಂದ್ಯ ಶ್ರೇಷ್ಠ: ನಿಶಾಂತ್ ಸಿಂಧು