Bengaluru, Karnataka: ಕರ್ನಾಟಕದ ರಾಜಕೀಯದಲ್ಲಿ ಇದೀಗ ಸಂಚಲನೆ ಮೂಡಿದೆ. ಅದರಲ್ಲೂ ಮುನಿರತ್ನಂ ನಾಯ್ಡು(Munirathna Naidu) ವಿರುದ್ಧದ ಹನಿಟ್ರ‍್ಯಾಪ್ ಆರೋಪ ಬಿರುಗಾಳಿ ಸೃಷ್ಟಿ ಮಾಡುತ್ತಿದೆ. ಇದರ ಜೊತೆಗೆ ಮುನಿರತ್ನಂ ನಾಯ್ಡು ತಮ್ಮದೇ ಪಕ್ಷದ ಅಂದ್ರೆ ಬಿಜೆಪಿ ಪಕ್ಷದ ನಾಯಕರನ್ನ ಕೂಡ ಟರ‍್ಗೆಟ್ ಮಾಡಿದ್ರು ಎಂಬ ಆರೋಪ ಕೇಳಿಬಂದಿದೆ.
ಹೀಗೆ BJP ಪಕ್ಷದಲ್ಲಿ, ಮುನಿರತ್ನಂ ನಾಯ್ಡು ಟರ‍್ಗೆಟ್ ಮಾಡಿದ್ದ ನಾಯಕರನ್ನ ‘ಏಡ್ಸ್ ರಕ್ತ’ ಬಳಸಿ HIV ಹಬ್ಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಅವರ ವಿರುದ್ಧ ಇರುವ ಅತ್ಯಾಚಾರ ಹಾಗೂ ಬ್ಲ್ಯಾಕ್ಮೇಲ್ ಪ್ರಕರಣದ ವಿಚಾರಣೆ ಮಾಡಲಿದ್ದಾರೆ. ಎಚ್ಐವಿ ಪಾಸಿಟಿವ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆನ್ನುವ ಆರೋಪ ಕೂಡ ಇವರ ಮೇಲಿದೆ. ಅಲ್ಲದೆ ಇನ್ನೊಬ್ಬ ಮಹಿಳೆ ಕೂಡ ಮುನಿರತ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ.
BJP ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದ ಬೆನ್ನಲ್ಲೆ ರಾಮನಗರ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಮುನಿರತ್ನ ವಿರುದ್ಧ ಮತ್ತೊಬ್ಬ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದಾರೆ.
ಅನೇಕ ಆರೋಪಗಳು ಮುನಿರತ್ನ ಮೇಲೆ ಕೇಳಿ ಬಂದಿವೆ ವಿಚಾರಣೆ ವೇಳೆ ಯಾವೆಲ್ಲಾ ಸತ್ಯಾಂಶಗಳು ಹೊರಬರಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.