
ಭಾರತದಲ್ಲಿ ಇಂಧನ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಅವಶ್ಯಕವಾಗಿರುವ ರೆರ್ ಅರ್ಥ್ ಮ್ಯಾಗ್ನೆಟ್ಗಳನ್ನು (rare earth magnets) ಸ್ಥಳೀಯವಾಗಿ ತಯಾರಿಸಲು ಚಿಂತನೆ ಆರಂಭವಾಗಿದೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಭಾರತ ಸರ್ಕಾರದ ಪ್ರೋತ್ಸಾಹದೊಂದಿಗೆ ಮಹೀಂದ್ರಾ ಆಟೋಮೋಟಿವ್ ಮತ್ತು UNO ಮಿಂಡಾ ಕಂಪನಿಗಳು ಈ ಉತ್ಪಾದನೆಯಲ್ಲಿ ತೊಡಗಲು ಮುಂದಾಗಿವೆ.
ರಾಯಿಟರ್ಸ್ ವರದಿಯ ಪ್ರಕಾರ, ಈ ಪರಿಸ್ಥಿತಿಯು ಭಾರತ ಸರ್ಕಾರವನ್ನು ರೇರ್ ಅರ್ಥ್ ಮ್ಯಾಗ್ನೆಟಿಕ್ಗಳ ಸಂಗ್ರಹವನ್ನು ನಿರ್ಮಿಸಲು, ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳಿಗೆ ಅಗತ್ಯವಿರುವ ಘಟಕಗಳ ದೇಶೀಯ ಉತ್ಪಾದನೆಗೆ ಪ್ರೋತ್ಸಾಹವನ್ನು ನೀಡಲು ಪರಿಗಣಿಸುವಂತೆ ಪ್ರೇರೇಪಿಸಿದೆ. ಮಹೀಂದ್ರಾ ಆಟೋಮೋಟಿವ್ ಸೇರಿದಂತೆ ಕೆಲವು ಕಂಪನಿಗಳು ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಹೂಡಿಕೆ ಮಾಡಲು ಅಥವಾ ಸ್ಥಾಪಿಸಲು ಆಸಕ್ತಿ ತೋರಿಸಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಭಾರತದ ಶಕ್ತಿ ಮತ್ತು ಸವಾಲುಗಳು
- ಭಾರತವು ವಿಶ್ವದಲ್ಲಿ ಐದನೇ ಅತಿದೊಡ್ಡ ರೇರ್ ಅರ್ಥ್ ಖನಿಜ ಸಂಪತ್ತನ್ನು ಹೊಂದಿದೆ.
- 2024ರಲ್ಲಿ IREL (Indian Rare Earths Limited) ಸುಮಾರು 2,900 ಟನ್ ಖನಿಜಗಳನ್ನು ಉತ್ಪಾದಿಸಿದೆ.
- ಗಣಿಗಾರಿಕೆ ತಂತ್ರಜ್ಞಾನ ಮತ್ತು ಮೂಲಸೌಕರ್ಯದ ಕೊರತೆ ಪ್ರಮುಖ ಅಡ್ಡಿಯಾಗಿದೆ.
ಭವಿಷ್ಯ ಯೋಜನೆಗಳು
- ದೇಶೀಯ ಉತ್ಪಾದನೆ ಹೆಚ್ಚಿಸಲು IREL ರಫ್ತು ನಿಲ್ಲಿಸಿ ಆಂತರಿಕ ಬಳಕೆಗೆ ಒತ್ತು ನೀಡುತ್ತಿದೆ.
- ಮ್ಯಾನ್ಮಾರ್ ಸೇರಿದಂತೆ ಐದು ಮಧ್ಯ ಏಷ್ಯಾ ದೇಶಗಳಲ್ಲಿ ಭಾರತೀಯ ತಂಡಗಳು ಸಂಪತ್ತಿನ ಅಧ್ಯಯನ ನಡೆಸುತ್ತಿವೆ.
ಈ ಯೋಜನೆಯ ಯಶಸ್ಸಿನಿಂದ ಭಾರತವು ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯತ್ತ ಪಾದಾರ್ಪಣೆ ಮಾಡಲಿದ್ದು, ಚೀನಾ ಮೇಲಿನ ಅವಲಂಬನೆಯು ತಗ್ಗುವ ಸಾಧ್ಯತೆ ಇದೆ.