Home News ಟಿ20 Cricket ನಲ್ಲಿ Rashid Khan ಹೊಸ ವಿಶ್ವ ದಾಖಲೆ

ಟಿ20 Cricket ನಲ್ಲಿ Rashid Khan ಹೊಸ ವಿಶ್ವ ದಾಖಲೆ

Rashid Khan creates new world record in T20 cricket

ಅಫ್ಘಾನಿಸ್ತಾನದ ಸ್ಪಿನ್ ತಾರೆ ರಶೀದ್ ಖಾನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶಾರ್ಜಾದಲ್ಲಿ UAE ವಿರುದ್ಧ ನಡೆದ ಪಂದ್ಯದಲ್ಲಿ ಅವರು 4 ಓವರ್ ಎಸೆದು ಕೇವಲ 21 ರನ್ ನೀಡಿ 3 ವಿಕೆಟ್ ಪಡೆದರು.

ಈ ಸಾಧನೆಯಿಂದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ರಶೀದ್ ಖಾನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆಯು ನ್ಯೂಝಿಲೆಂಡ್‌ನ ವೇಗಿ ಟಿಮ್ ಸೌಥಿ ಹೆಸರಿನಲ್ಲಿತ್ತು. ಸೌಥಿ 123 ಇನಿಂಗ್ಸ್‌ನಲ್ಲಿ 164 ವಿಕೆಟ್ ಕಬಳಿಸಿದ್ದರು.

2015ರಿಂದ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿರುವ ರಶೀದ್, ಇದುವರೆಗೆ 98 ಪಂದ್ಯಗಳಲ್ಲಿ 165 ವಿಕೆಟ್ ಪಡೆದಿದ್ದಾರೆ. ಇದರಿಂದ ಸೌಥಿಯ ದಾಖಲೆಯನ್ನು ಮುರಿದು ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.

ಇದಲ್ಲದೆ, ಟಿ20 ಕ್ರಿಕೆಟ್ (ಅಂತರರಾಷ್ಟ್ರೀಯ + ಲೀಗ್) ಒಟ್ಟಾರೆ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿಯೂ ರಶೀದ್ ಖಾನ್ ಹೆಸರು ದಾಖಲೆಯಾಗಿದೆ. 484 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿ 661 ವಿಕೆಟ್ ಪಡೆದಿರುವ ಅವರು, ಟಿ20 ಇತಿಹಾಸದಲ್ಲೇ 650ಕ್ಕೂ ಹೆಚ್ಚು ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version