back to top
26.3 C
Bengaluru
Friday, July 18, 2025
HomeBusinessRBI: ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸದಿದ್ದರೆ ದಿನಕ್ಕೆ 100 ರೂ ದಂಡ

RBI: ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸದಿದ್ದರೆ ದಿನಕ್ಕೆ 100 ರೂ ದಂಡ

- Advertisement -
- Advertisement -

ಬ್ಯಾಂಕುಗಳು (bank) ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI-Reserve Bank of India) ಸೂಚಿಸಿದೆ. ಗ್ರಾಹಕರ ದೂರುಗಳನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದರೆ, ಪ್ರತಿದಿನಕ್ಕೂ 100 ರೂ. ದಂಡ (penalty) ವಿಧಿಸಲಾಗುತ್ತದೆ. ಈ ನಿಯಮ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಗೆ (CIC) ಕೂಡ ಅನ್ವಯಿಸುತ್ತದೆ. ದಂಡದ ಮೊತ್ತವು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ.

RBI, ಸಿಬಿಲ್, ಎಕ್ಸ್​ಪೀರಿಯನ್ ಮುಂತಾದ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಂದ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದಾಗ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುವಂತೆ ಸೂಚಿಸಿದೆ.

ಬ್ಯಾಂಕುಗಳು, ತಮ್ಮ ಗ್ರಾಹಕರು ಸಾಲ ಮರುಪಾವತಿಸಲು ವಿಫಲವಾದರೆ, ಆ ಮಾಹಿತಿಯನ್ನು 21 ದಿನಗಳ ಒಳಗೆ ಗ್ರಾಹಕರಿಗೆ ನೀಡಬೇಕು. ಇದನ್ನು ಪಾಲಿಸದಿದ್ದರೆ, 100 ರೂ. ದಂಡ ವಿಧಿಸಲಾಗುತ್ತದೆ.

ಬ್ಯಾಂಕುಗಳು ಮತ್ತು ಸಿಐಸಿ, ತಮ್ಮ ಗ್ರಾಹಕರಿಂದ ಬಂದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page