Home News Playoff ಕನಸು ಜೀವಂತವಿರಿಸಲು RCB ಗೆ 3 ಮ್ಯಾಚ್ ಗೆಲುವು ಅಗತ್ಯ

Playoff ಕನಸು ಜೀವಂತವಿರಿಸಲು RCB ಗೆ 3 ಮ್ಯಾಚ್ ಗೆಲುವು ಅಗತ್ಯ

138
RCB

IPL 2025ರಲ್ಲಿ ಈಗಾಗಲೇ 56 ಪಂದ್ಯಗಳು ಮುಗಿದಿವೆ. ಈ ವೇಳೆಗೆ ಗುಜರಾತ್ ಟೈಟಾನ್ಸ್ (GT) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB-Royal Challengers Bangalore) ತಂಡ ದ್ವಿತೀಯ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಈ ನಾಲ್ಕು ತಂಡಗಳು ಪ್ಲೇಆಫ್‌ಗೆ ಪ್ರವೇಶಿಸಬೇಕಾದರೆ ಮುಂದಿನ ಪಂದ್ಯಗಳು ಬಹಳ ಮುಖ್ಯ. RCB ತಂಡ ಪ್ಲೇಆಫ್‌ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇರಬೇಕೆಂದರೆ ಮುಂದಿನ 3 ಪಂದ್ಯಗಳಲ್ಲಿ ಗೆಲ್ಲಲೇಬೇಕು. ಏಕೆಂದರೆ GT ತಂಡವೂ ಮುಂದಿನ 3 ಪಂದ್ಯಗಳಲ್ಲಿ ಗೆದ್ದರೆ 22 ಅಂಕಗಳನ್ನು ಸಂಪಾದಿಸುತ್ತದೆ.

RCB ಕೂಡ ಮೂರು ಪಂದ್ಯಗಳಲ್ಲಿ ಗೆದ್ದರೆ 22 ಅಂಕಗಳು ದೊರೆಯುತ್ತವೆ ಮತ್ತು ಟಾಪ್-2 ಸ್ಥಾನ ಕಾಯ್ದುಕೊಳ್ಳಬಹುದು. ಆದರೆ ಒಂದಾದರೂ ಪಂದ್ಯದಲ್ಲಿ ಸೋಲಾದರೆ RCB ಅಂಕಗಳು 20ಕ್ಕೆ ಇಳಿಯುತ್ತವೆ.

ಇನ್ನು ಪಂಜಾಬ್ ಕಿಂಗ್ಸ್ ಮೂರು ಪಂದ್ಯಗಳಲ್ಲಿ ಗೆದ್ದರೆ 21 ಅಂಕಗಳೊಂದಿಗೆ RCB ಗಿಂತ ಮೇಲಿಗೆ ಹೋಗಬಹುದು. ಅಂದರೆ RCB ತಂಡ ಎಲಿಮಿನೇಟರ್ ಪಂದ್ಯವಾಡಬೇಕಾಗಬಹುದು.

ಪ್ಲೇಆಫ್ ನಿಯಮದಂತೆ, ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳು ಕ್ವಾಲಿಫೈಯರ್-1 ಪಂದ್ಯವಾಡುತ್ತವೆ. ಈ ಪಂದ್ಯದಲ್ಲಿ ಗೆದ್ದರೆ ನೇರವಾಗಿ ಫೈನಲ್‌ಗೆ ಹೋಗಬಹುದು. ಸೋತ ತಂಡದಿಗೂ ಇನ್ನೊಂದು ಅವಕಾಶ ಇರುತ್ತದೆ — ಕ್ವಾಲಿಫೈಯರ್-2ನಲ್ಲಿ ಆಟವಾಡಬಹುದು.

ಆದರೆ 3ನೇ ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವಾಡುತ್ತವೆ. ಈ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಹೊರಹೋಗಬೇಕು. ಗೆದ್ದರೆ ಮಾತ್ರ ಮುಂದಿನ ಕ್ವಾಲಿಫೈಯರ್-2ನಲ್ಲಿ ಆಡಬಹುದು.

ಹೀಗಾಗಿ RCB ನಿಗೆ ಪ್ಲೇಆಫ್‌ನಲ್ಲಿ ಉತ್ತಮ ಅವಕಾಶಗಳು ಸಿಗಬೇಕೆಂದರೆ ಮುಂದಿನ ಮೂರು ಪಂದ್ಯಗಳಲ್ಲೂ ಗೆಲ್ಲುವುದು ಅತ್ಯಂತ ಅಗತ್ಯ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page