Home Technology Gadgets Realme NARZO N65 5G Mobile ಫೋನ್‌ ದರದಲ್ಲಿ ಭಾರೀ ಇಳಿಕೆ

Realme NARZO N65 5G Mobile ಫೋನ್‌ ದರದಲ್ಲಿ ಭಾರೀ ಇಳಿಕೆ

Realme NARZO N65 5G Mobile Phone

ದೀಪಾವಳಿ ಹಬ್ಬದ (Diwali festival) ಅಂಗವಾಗಿ ಇ ಕಾಮರ್ಸ್‌ ದಿಗ್ಗಜ ಅಮೆಜಾನ್‌ (Amazon) ತಾಣವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ (electronics product) ಮೇಲೆ ಡಿಸ್ಕೌಂಟ್‌ (discount) ಘೋಷಣೆ ಮಾಡಿದೆ.

ಅದರಲ್ಲಿಯೂ ಆಯ್ದ ಕೆಲವು ಮೊಬೈಲ್‌ಗಳಿಗೆ ರಿಯಾಯಿತಿ ತಿಳಿಸಿದ್ದು, ಜೊತೆಗೆ ಬ್ಯಾಂಕ್‌ ಆಫರ್‌ ಸಹ ಲಭ್ಯ ಮಾಡಿದೆ. ಆ ಪೈಕಿ ರಿಯಲ್‌ಮಿ ನಾರ್ಜೋ N65 5G (Realme NARZO N65 5G) ಫೋನ್‌ ಆಫರ್‌ ಪಡೆದಿದ್ದು ತನ್ನತ್ತ ಸೆಳೆಯುತ್ತಿದೆ.

ಇ ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ (e-commerce website Amazon platform) ರಿಯಲ್‌ಮಿ ನಾರ್ಜೋ N65 5G (Realme NARZO N65 5G) ಫೋನ್‌ ಶೇ. 25% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಈ ಫೋನಿನ 4GB RAM + 128GB ವೇರಿಯಂಟ್‌ 10,499ರೂ. ಗಳ ಆಫರ್‌ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಖರೀದಿದಾರರು ಇನ್ನಷ್ಟು ರಿಯಾಯಿತಿ ಪಡೆಯಲು ಲಭ್ಯ ಇರುವ ಬ್ಯಾಂಕ್‌ ಆಫರ್‌ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಳ್ಳಬಹುದು.

ರಿಯಲ್‌ಮಿ ನಾರ್ಜೋ N65 5G ಫೋನ್‌ ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 15W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ N65 5G ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6300 5G ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಇದೆ. ಅಲ್ಲದೇ 6GB RAM ಡೈನಾಮಿಕ್ RAM ಸೌಲಭ್ಯ ಸಹ ಈ ಫೋನ್‌ ಪಡೆದಿದೆ. ಇದರೊಂದಿಗೆ 4GB + 12GB, 6GB + 128GB ಹಾಗೂ 8GB + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದೆ.

ರಿಯಲ್‌ಮಿ ನಾರ್ಜೋ N65 5G ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ದ್ವಿತೀಯ ಕ್ಯಾಮೆರಾವು ಬೇಸಿಕ್ ಸೆನ್ಸಾರ್‌ ಸೌಲಭ್ಯ ಪಡೆದಿದೆ.

ಇದರ ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಇದು ಪಡೆದುಕೊಂಡಿದೆ. ರಿಯಲ್‌ಮಿ ನಾರ್ಜೋ N65 5G ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 15W ವೇಗದ ಚಾರ್ಜಿಂಗ್‌ಗೆ ಸೌಲಭ್ಯ ಸಹ ಇದೆ.

ಅಲ್ಲದೇ ಕ್ವಿಕ್‌ ಚಾರ್ಜ್‌ ರಿವರ್ಸ್ ಚಾರ್ಜಿಂಗ್ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ. ಅಲ್ಲದೇ 5G ವೈ-ಫೈ ಮತ್ತು ಬ್ಲೂಟೂತ್ ಸೌಲಭ್ಯ ಪಡೆದಿದ್ದು, ಜೊತೆಗೆ IP54 ರೇಟಿಂಗ್ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಕಲರ್ ಆಯ್ಕೆಯಲ್ಲಿ ಲಭ್ಯ.

For Daily Updates WhatsApp ‘HI’ to 7406303366



NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version