ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನ.22ರಿಂದ ಶುರುವಾಗಲಿದೆ. ಮೊದಲ ಪಂದ್ಯ ಪರ್ತ್ನ (Perth) ಒಪ್ಟಸ್ ಸ್ಟೇಡಿಯಂನಲ್ಲಿ (Optus Stadium) ನಡೆಯಲಿದ್ದು, ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ (Virat Kohli) ಹಲವಾರು ದಾಖಲೆಗಳನ್ನು ನಿರ್ಮಿಸಬಹುದು.
ಈಗಾಗಲೇ ಹಲವು ದಾಖಲೆಗಳನ್ನು ಹೊಂದಿರುವ ವಿರಾಟ್, ಈ ಸರಣಿಯ ಐದು ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳನ್ನು ಬರೆಯಲು ಉತ್ತಮ ಅವಕಾಶವಿದೆ.ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 1,809 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಕೊಹ್ಲಿ ಗೆ ಕೇವಲ 458 ರನ್ ಬೇಕಾಗಿದೆ.
ದಾಖಲೆಗಳ ಪಟ್ಟಿ
- ಅತ್ಯಧಿಕ ಶತಕ: ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಈಗಾಗಲೇ 6 ಶತಕಗಳನ್ನು ಬಾರಿಸಿದ್ದಾರೆ. ಈ ಸರಣಿಯಲ್ಲಿ 4 ಸೆಂಚುರಿ ಸಿಡಿಸಿದರೆ, ಇಂಗ್ಲೆಂಡ್‌ನ ಜಾಕ್ ಹಾಬ್ಸ್ (9) ದಾಖಲೆಯನ್ನು ಮುರಿಯಬಹುದು.
- ಅಡಿಲೇಡ್ ಸ್ಟೇಡಿಯಂ ವಿಶೇಷ: ಅಡಿಲೇಡ್‌ನಲ್ಲಿ 93 ರನ್ ಗಳಿಸಿದರೆ, ಅಲ್ಲಿ ಅತ್ಯಧಿಕ ರನ್ ಬಾರಿಸಿದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.
- 3500 ರನ್ ಗಡಿ: ಆಸ್ಟ್ರೇಲಿಯಾದಲ್ಲಿ 74 ರನ್ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3500 ರನ್ ಗಡಿಯನ್ನು ಮುಟ್ಟಲಿದ್ದಾರೆ.
- ಅತಿ ಹೆಚ್ಚು ಶತಕ ಒಂದು ಮೈದಾನದಲ್ಲಿ: ಅಡಿಲೇಡ್‌ನಲ್ಲಿ ಒಂದು ಶತಕ ಬಾರಿಸಿದರೆ, ಒಂದು ಮೈದಾನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
- ಅತಿ ಹೆಚ್ಚು ಬೌಂಡರಿ: ಟೆಸ್ಟ್ ಕ್ರಿಕೆಟ್‌ನಲ್ಲಿ 209 ಬೌಂಡರಿಗಳ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ 59 ಬೌಂಡರಿ ಬೇಕಾಗಿದೆ.
- 100 ಅಂತಾರಾಷ್ಟ್ರೀಯ ಪಂದ್ಯಗಳು: ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟ್ರೀಯ ಪಂದ್ಯಗಳ ದಾಖಲೆ ಹೊಂದಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳಲ್ಲಿ ಆಡಿದರೆ ಈ ದಾಖಲೆಯನ್ನು ಸರಿಗಟ್ಟಲಿದ್ದಾರೆ.
- ಅತ್ಯಧಿಕ ಶತಕಗಳು: ಸಚಿನ್ 20 ಶತಕಗಳ ದಾಖಲೆಯನ್ನು ಹೊಂದಿದ್ದು, ಕೊಹ್ಲಿಗೆ 5 ಶತಕಗಳು ಬೇಕಾಗಿದೆ ಈ ದಾಖಲೆ ಮುರಿಯಲು.
- ಅತ್ಯಧಿಕ ಕ್ಯಾಚ್‌ಗಳು: ಅಗತ್ಯ 4 ಕ್ಯಾಚ್‌ಗಳನ್ನು ಹಿಡಿದರೆ, 70 ಕ್ಯಾಚ್ಗಳ ಹೊಸ ದಾಖಲೆ ರಚಿಸಬಹುದು.
- 500 ಬೌಂಡರಿ ಗಡಿ: ವಿರಾಟ್ 4 ಬೌಂಡರಿ ಬಾರಿಸಿದರೆ 500 ಗಡಿಯನ್ನು ತಲುಪಲಿದ್ದಾರೆ.
ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಿಂಗ್ ಕೊಹ್ಲಿ ಎಂಬ ಬಿರುದನ್ನು ಮತ್ತೊಮ್ಮೆ ಸಾಬೀತು ಮಾಡುವ ನಿರೀಕ್ಷೆಯಾಗಿದೆ.