back to top
20.9 C
Bengaluru
Friday, November 22, 2024
HomeAutoIndian Army ಗೆ ಜನಪ್ರಿಯ Renault car ಗಳ ಹಸ್ತಾಂತರ

Indian Army ಗೆ ಜನಪ್ರಿಯ Renault car ಗಳ ಹಸ್ತಾಂತರ

- Advertisement -
- Advertisement -

ರೆನಾಲ್ಟ್ ಇಂಡಿಯಾ (Renault India), ಕೈಗೆಟುಕುವ ಬೆಲೆಯ ವಿವಿಧ ಕಾರುಗಳನ್ನು ಮಾರಾಟ ಮಾರಾಟ ಮಾಡುತ್ತಿದ್ದು, ದೇಶಾದ್ಯಂತ ಮನೆ ಮಾತಾಗಿದೆ. ಸದ್ಯ ಕಂಪನಿಯ ಜನಪ್ರಿಯ ಟ್ರೈಬರ್ ಮತ್ತು ಕಿಗರ್ (Triber and Kiger) ಕಾರುಗಳನ್ನು ಭಾರತೀಯ ಸೇನೆಯ (Indian Army) ಈಸ್ಟರ್ನ್ ಕಮಾಂಡ್‍ಗೆ (Eastern Command) ಹಸ್ತಾಂತರ ಮಾಡಿದೆ.

ಸೆಪ್ಟೆಂಬರ್‌ನಲ್ಲಿಯೂ ಕಂಪನಿಯು ಕೆಲವು ಕಾರುಗಳನ್ನು ನಾರ್ತನ್ ಕಮಾಂಡ್‍ನ ಭಾಗವಾಗಿದ್ದ 14 ಕಾರ್ಪ್ಸ್‌ಗೆ (Fire & Fury Corps) ಉಡೊಗೊರೆಯಾಗಿ ನೀಡಿತ್ತು. ಈ 14 ಕಾರ್ಪ್ಸ್ ಸೈನಿಕರು ಕಾರ್ಗಿಲ್-ಲೇಹ್ ಹಾಗೂ ಸಿಯಾಚಿನ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಈ ಕುರಿತಂತೆ ರೆನಾಲ್ಟ್ ಇಂಡಿಯಾ CEO ಎಂ.ವೆಂಕಟರಾಮ್ (M.Venkatram) ಅವರು ಸಂತಸ ಹಂಚಿಕೊಂಡಿದ್ದಾರೆ. ‘ನೂತನ ಕಾರುಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಿರುವುದು ನಮಗೆ ಹೆಮ್ಮೆ ತಂದಿದೆ.

Make in India ಪರಿಕಲ್ಪನೆಯನ್ನು ಗುಣಮಟ್ಟ, ಸುರಕ್ಷತೆಗೆ ಹೆಸರುವಾಸಿಯಾಗಿರುವ ಟ್ರೈಬರ್ ಮತ್ತು ಕಿಗರ್ ಕಾರುಗಳು ಪ್ರತಿಬಿಂಬಿಸುತ್ತೇವೆ’ ಎಂದು ಹೇಳಿದ್ದಾರೆ.

ಸದ್ಯ, ರೆನಾಲ್ಟ್ ಇಂಡಿಯಾ ದೇಶೀಯ ಮಾರುಕಟ್ಟೆ ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳನ್ನು (Kwid, Kiger and Triber car) ಮಾರಾಟ ಮಾಡುತ್ತಿದೆ.

ಅದರಲ್ಲೂ ಕ್ವಿಡ್ (KWID) ಜನಪ್ರಿಯ ಹ್ಯಾಚ್ಬ್ಯಾಕ್ ಆಗಿದ್ದು, ರೂ.4.70 ರಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (8-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, ಕೀ ಲೆಸ್ ಎಂಟ್ರಿ ಹಾಗೂ ಮ್ಯಾನುವಲ್ AC ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪ್ರಯಾಣಿಕರ ರಕ್ಷಣೆಗೆ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.

ರೆನಾಲ್ಟ್ ಕಿಗರ್ (Renault Kiger) ಇದೊಂದು SUVಯಾಗಿದೆ. ರೂ.6 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 18.24 ರಿಂದ 20.5 ಕೆಎಂಪಿಎಲ್ವರೆಗೆ ಮೈಲೇಜ್ ನೀಡುತ್ತದೆ.

ನೂತನ ರೆನಾಲ್ಟ್ ಕಿಗರ್ ಕಾರಿನಲ್ಲಿ 5 ಮಂದಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್- ಡ್ರೈವರ್ ಡಿಸ್ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್ ಮತ್ತು ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ರೆನಾಲ್ಟ್ ಟ್ರೈಬರ್ (Renault Triber) ಕೂಡ ಪ್ರಮುಖ MPVಯಾಗಿದೆ. ಇದು ರೂ.6 ರಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನ್ನು ಹೊಂದಿದ್ದು, 18.2 ರಿಂದ 20 ಕೆಎಂಪಿಎಲ್ವರೆಗೆ ಮೈಲೇಜ್ ಕೊಡುತ್ತದೆ.

ಜೊತೆಗೆ 7 ಆಸನಗಳನ್ನು ಪಡೆದಿದೆ. ಹೊಸ ರೆನಾಲ್ಟ್ ಟ್ರೈಬರ್ ಕಾರು, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಡ್ರೈವರ್ ಡಿಸ್ಪ್ಲೇ (7-ಇಂಚು), ವೈರ್ಲೆಸ್ ಚಾರ್ಜರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದ 4-ಏರ್ಬ್ಯಾಗ್ಗಳು ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page