
ರೆನಾಲ್ಟ್ ಕಂಪನಿಯ ಜನಪ್ರಿಯ ಕಾಂಪ್ಯಾಕ್ಟ್ SUV ಕೈಗರ್ (Renault Kaigar) ಶೀಘ್ರದಲ್ಲೇ ಹೊಸ ರೂಪದಲ್ಲಿ ಬರಲಿದೆ. 2021ರಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಇದು ದೊಡ್ಡ ಬದಲಾವಣೆಯನ್ನು ಕಂಡಿರಲಿಲ್ಲ. ಈಗ ಮೊದಲ ಬಾರಿಗೆ ಫೇಸ್ಲಿಫ್ಟ್ ಆವೃತ್ತಿ ಮಾರುಕಟ್ಟೆಗೆ ಬರುತ್ತಿದೆ.
ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ XUV300ಗೆ ಹೋಲಿಸಿದರೆ ಕೈಗರ್ ಸರಳವಾದರೂ ಜನರಿಗೆ ನಂಬಿಕೆಯ ಕಾರಾಗಿದೆ. ಕಡಿಮೆ ಬಜೆಟ್ನಲ್ಲಿ SUV ಬಯಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ.
- ಹೊಸ ಬಣ್ಣ ಮತ್ತು ವಿನ್ಯಾಸ
- ಹೊಸ ಲೈಮ್ ಗ್ರೀನ್ ಬಣ್ಣದಲ್ಲಿ ಕಾರು ಬರುತ್ತಿದೆ. ಮುಂಭಾಗದಲ್ಲಿ ರೆನಾಲ್ಟ್‌ನ ಹೊಸ 2D ಲೋಗೋ ಇರುತ್ತದೆ.
- ಹೊಸ ಗ್ರಿಲ್
- ಬಂಪರ್‌ಗಳಲ್ಲಿ ಬದಲಾವಣೆ
- ಸಣ್ಣ ಹೆಡ್ ಲೈಟುಗಳು ಮತ್ತು LED DRL
- ಹಿಂಭಾಗದಲ್ಲಿ C ಆಕಾರದ ಟೈಲ್ ಲೈಟುಗಳು
ಒಳಗಿನ ಬದಲಾವಣೆಗಳು
- ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ, ಮೃದು ಮೆಟೀರಿಯಲ್, ಹೊಸ ಸೀಟ್ ಬಣ್ಣಗಳು ಇರುತ್ತವೆ.
- 7 ಇಂಚಿನ ಟಚ್‌ಸ್ಕ್ರೀನ್ (ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಬೆಂಬಲ)
- ಆಟೋಮೆಟಿಕ್ AC
- ವೈರ್ಲೆಸ್ ಚಾರ್ಜರ್
- ಅರ್ಕಾಮಿಸ್ ಸೌಂಡ್ ಸಿಸ್ಟಮ್
- ಆಂಬಿಯೆಂಟ್ ಲೈಟಿಂಗ್
- ರಿಯರ್ AC ವೆಂಟ್ಸ್
- ಸುರಕ್ಷತಾ ವೈಶಿಷ್ಟ್ಯಗಳು
- ಹಿಂದಿನ 4 ಏರ್‌ಬ್ಯಾಗ್‌ಗಳ ಬದಲು ಈಗ ಎಲ್ಲಾ ಮಾದರಿಗಳಲ್ಲೂ 6 ಏರ್‌ಬ್ಯಾಗ್‌ಗಳು ಇರುತ್ತವೆ.
- 5 ಸ್ಟಾರ್ ಸೇಫ್ಟಿ ರೇಟಿಂಗ್ ಗುರಿ
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ
- ಹಿಲ್ ಸ್ಟಾರ್ಟ್ ಅಸಿಸ್ಟ್
- ABS, EBD
- ರಿವರ್ಸ್ ಪಾರ್ಕಿಂಗ್ ಸೆನ್ಸರ್
ಎಂಜಿನ್ ಆಯ್ಕೆಗಳು: ಹಳೆಯದೆಯೇ ಇರುವ 1.0 ಲೀ. ಪೆಟ್ರೋಲ್ ಮತ್ತು 1.0 ಲೀ. ಟರ್ಬೊ ಪೆಟ್ರೋಲ್ ಎಂಜಿನ್‌ಗಳು ಲಭ್ಯ. ಮ್ಯಾನುವಲ್, AMT ಮತ್ತು CVT ಗೇರ್‌ಬಾಕ್ಸ್‌ಗಳಲ್ಲಿ ಬರುತ್ತದೆ. ಡೀಲರ್ ಮಟ್ಟದಲ್ಲಿ CNG ರೂಪಾಂತರವೂ ಬರಬಹುದು.
ಬೆಲೆ ಮತ್ತು ಬಿಡುಗಡೆ ದಿನಾಂಕ: ಹೊಸ ಕೈಗರ್ ಬೆಲೆ ₹6.20 ಲಕ್ಷದಿಂದ ₹11.50 ಲಕ್ಷದವರೆಗೆ ಇರಬಹುದು. ಆಗಸ್ಟ್ 24ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.