Home News ಈರುಳ್ಳಿ ಬೆಲೆ ಏರಿಕೆ! ರೈತ, ಗ್ರಾಹಕ ಇಬ್ಬರಿಗೂ ತಲೆನೋವು ಏಕೆ?

ಈರುಳ್ಳಿ ಬೆಲೆ ಏರಿಕೆ! ರೈತ, ಗ್ರಾಹಕ ಇಬ್ಬರಿಗೂ ತಲೆನೋವು ಏಕೆ?

234
The government plans to increase retail sales of onions

ಸಗಟು ಮಾರುಕಟ್ಟೆಯಲ್ಲಿ (wholesale markets) ಈರುಳ್ಳಿ ಬೆಲೆ (onion prices) ಕುಸಿತ ಕಂಡಿದ್ದರೂ, ಚಿಲ್ಲರೆ ಮಾರಾಟ (retail sales) ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಿಲೋ ಗ್ರಾಂಗೆ ಸದ್ಯ 40 ರೂಪಾಯಿ ಇದ್ದರೆ, ಚಿಲ್ಲರೆ ವ್ಯಾಪಾರದಲ್ಲಿ ಒಂದು ಕಿಲೋಗ್ರಾಂಗೆ 70-75 ರೂಪಾಯಿಗೆ ಮಾರಾಟವಾಗುತ್ತಿದೆ.

ಮಾರ್ಕೆಟ್ನಲ್ಲಿ ಈರುಳ್ಳಿ ಬೆಲೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ. ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಕೂಡಲೇ ಸರಕಾರ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಹಕರು ಆಗ್ರಹಿಸಿದರು.

ಮಾರುಕಟ್ಟೆಗೆ ಬೇಡಿಕೆಗೆ ತಕಷ್ಟು ಈರುಳ್ಳಿ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100 ರ ಗಡಿ ದಾಟುವ ಸಾಧ್ಯತೆ ಇದೆ. ಬೆಲೆ ಏರಿಕೆಯಿಂದಾಗಿ ಬಡ ಜನರು ರೋಸಿಹೋಗಿದ್ದಾರೆ. ಬಡವರು ಜೀವನ ಮಾಡುವುದು ಕಷ್ಟವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆ ಜಾಸ್ತಿಯಾಗಿತ್ತು. ಈ ವಾರ ಈರುಳ್ಳಿಯ ಬೆಲೆ ಜಾಸ್ತಿಯಾಗುತ್ತಿದೆ. ಬರುವ ಕಡಿಮೆ ಸಂಬಳದಲ್ಲಿಹೇಗೆ ಜೀವನ ನಡೆಸುವುದು. ತರಕಾರಿಯ ಬೆಲೆ ಕೇಳಿಯೇ ಭಯವಾಗುತ್ತಿದೆ ಎಂದು ಗ್ರಾಹಕರು ಹೇಳಿದರು.

ಈರುಳ್ಳಿ ಪೂರೈಕೆ ಕಡಿಮೆ


ಮುಂಗಾರು ಮಳೆ ಹೆಚ್ಚಾದ ಪರಿಣಾಮ ಈರುಳ್ಳಿ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಪರ ರಾಜ್ಯಗಳಿಂದ ಈರುಳ್ಳಿ ಆಮದು ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರಿಸಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಈರುಳ್ಳಿ ಬೆಲೆಯಲ್ಲಿಏರಿಕೆ ಕಂಡಿದೆ. ಒಂದು ಕೆಜಿ ಈರುಳ್ಳಿ ಬೆಲೆ 60 ರಿಂದ 70 ರೂ, ಆಗಿದೆ. ಹಬ್ಬದ ವೇಳೆ ಇನ್ನಷ್ಟು ಬೆಲೆ ದುಪ್ಪಟ್ಟವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ, ಹೆಚ್ಚು ಮಳೆಯಾಗುತ್ತಿದ್ದು, ಪರಿಣಾಮವಾಗಿ ಈರುಳ್ಳಿ ಬೆಳೆ ಕೊಳೆತು ಹೋಗುತ್ತಿದೆ. ಹೀಗಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page