ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ‘ಆರ್ಟೆಮಿಸ್-2’ ಮಿಷನ್ (Artemis-2 Mission) ಲಾಂಚಿಂಗ್ ದಿನಾಂಕವನ್ನು ಅಂತಿಮಗೊಳಿಸಿದೆ. ಈ ಕಾರ್ಯಾಚರಣೆಯ ಮೂಲಕ ನಾಸಾ 50 ವರ್ಷಗಳ ನಂತರ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ಪ್ರಯತ್ನಿಸುತ್ತಿದೆ. ಮಿಷನ್‌ನಲ್ಲಿ ನಾಲ್ಕು ಗಗನಯಾತ್ರಿಗಳು ಓರಿಯನ್ ಬಾಹ್ಯಾಕಾಶ ನೌಕೆಯಲ್ಲಿ ಸುಮಾರು 10 ದಿನಗಳ ಕಾಲ ಚಂದ್ರನ ಸುತ್ತ ಕಕ್ಷೆಯಲ್ಲಿ ಪ್ರಯಾಣಿಸಲಿದ್ದಾರೆ.
ಲಾಂಚ್ ವಿಂಡೋ ಫೆಬ್ರವರಿ-ಮಾರ್ಚ್ 2026ರ ನಡುವೆ ನಿಗದಿಪಡಿಸಲಾಗಿದೆ. ಮೊದಲ ಸಂಭಾವ್ಯ ಉಡಾವಣೆಯನ್ನು 2026 ಫೆಬ್ರವರಿ 5ರ ರಾತ್ರಿ ಮಾಡಲಾಗುವಂತೆ ಯೋಜಿಸಲಾಗಿದೆ, ಅಂತಿಮ ಉಡಾವಣೆ ದಿನಾಂಕ ಏಪ್ರಿಲ್ 26, 2026 ಎಂದು ನಾಸಾ ಘೋಷಿಸಿದೆ. ನಾಸಾದ ಕಾರ್ಯಕಾರಿ ಉಪ ಸಹಾಯಕ ಆಡಳಿತಾಧಿಕಾರಿ ಲಕೀಶಾ ಹಾಕಿನ್ಸ್ ಹೇಳಿರುವಂತೆ, ಇದು ಇತಿಹಾಸದಲ್ಲಿ ವಿಶೇಷ ಕ್ಷಣವಾಗಿದೆ.
ನಾಸಾ ಸಿಬ್ಬಂದಿ ಸದಸ್ಯರ ಸುರಕ್ಷತೆಯನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸುತ್ತದೆ ಮತ್ತು ಅಗತ್ಯವಿದ್ದರೆ ಉಡಾವಣಾ ಸಮಯವನ್ನು ವಿಸ್ತರಿಸಬಹುದು. ‘ಆರ್ಟೆಮಿಸ್ 2’ ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಮೊದಲ ಸಿಬ್ಬಂದಿ ಹಾರಾಟವಾಗಿರುತ್ತದೆ. ಈ ಹಿಂದಿನ ಕಾರ್ಯಕ್ರಮಗಳಲ್ಲಿ ಯಾವುದೇ ಸಿಬ್ಬಂದಿ ಹಾರಾಟವನ್ನು ಪ್ರಾರಂಭಿಸಲಾಗಿಲ್ಲ.
ಈ ಮಿಷನ್‌ನಲ್ಲಿ ಭಾಗವಹಿಸುವ ಸಿಬ್ಬಂದಿ: ರೀಡ್ ವೈಸ್ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್ (ಪೈಲಟ್), ಕ್ರಿಸ್ಟಿನಾ ಕೋಚ್ (ಮಿಷನ್ ಸ್ಪೆಷಲಿಸ್ಟ್), ಜೆರೆಮಿ ಹ್ಯಾನ್ಸೆನ್ (ಮಿಷನ್ ಸ್ಪೆಷಲಿಸ್ಟ್, ಕೆನಡಾ).
ನಾಸಾ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಬಳಸಿ ಓರಿಯನ್ ನೌಕೆಯನ್ನು ಚಂದ್ರ ಸುತ್ತ ‘ಫ್ರೀ-ರಿಟರ್ನ್’ ಕಕ್ಷೆಯಲ್ಲಿ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಚಂದ್ರನ ಕಕ್ಷೆಯಲ್ಲಿ ಪ್ರವೇಶವಿಲ್ಲದೆ ಭೂಮಿಗೆ ಹಿಂತಿರುಗುತ್ತದೆ. ತಾಂತ್ರಿಕ ಅಥವಾ ಅನಾಹುತದ ಸಂದರ್ಭಗಳಲ್ಲಿ ನೌಕೆಯು ಸ್ವಯಂಚಾಲಿತವಾಗಿ ಭೂಮಿಗೆ ಹಿಂದಿರುಗುತ್ತದೆ.
ಮಿಷನ್ ಹಾರಾಟ ನಿರ್ದೇಶಕ ಜೆಫ್ ರಾಡಿಗನ್ ಹೇಳಿರುವಂತೆ, ಈ ಮಿಷನ್ ಹಿಂದಿನ ಮಿಷನ್ಗಳಿಗಿಂತ ಹೆಚ್ಚು ದೂರ ಹೋಗುತ್ತದೆ. ಮಿಷನ್ ಎಂಟ್ರಿ ಫ್ಲೈಟ್ ನಿರ್ದೇಶಕ ರಿಕ್ ಹೆನ್ಫ್ಲಿಂಗ್ ತಿಳಿಸಿದ್ದಂತೆ, ಮೊದಲ ಕಾರ್ಯಾಚರಣೆ ವೇಳೆ ಎದುರಾದ ಶಾಖ ಕವಚ ಸಮಸ್ಯೆಗಳನ್ನು ವಿಶ್ಲೇಷಿಸಿ ಆರ್ಟೆಮಿಸ್-2 ಮಾರ್ಗವನ್ನು ಸಮರ್ಪಕವಾಗಿ ಬದಲಿಸಲಾಗಿದೆ.
launch pad ಮತ್ತು ಇಂಧನ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ರೆ, ಹೈಡ್ರೋಜನ್ ಸೋರಿಕೆಯ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದೆ. ಇದರ ಮಿಷನ್ ಸುರಕ್ಷಿತವಾಗಿ ಮತ್ತು ಸಮಯಕ್ಕೆ ಉಡಾವಣೆ ಮಾಡಬಹುದಾಗಿದೆ.







