ಗುಜರಾತಿ ಬೆಡಗಿ ರಿಯಾ ಸಿಂಘಾ(Rhea Singha)‘ಮಿಸ್ ಯೂನಿವರ್ಸ್ ಇಂಡಿಯಾ 2024’ (Miss Universe India 2024) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2024 ರ (Rhea Singha crowned Miss Universe India 2024) ಗ್ರ್ಯಾಂಡ್ ಫಿನಾಲೆ ಭಾನುವಾರ ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ನಡೆಯಿತು. ಮಿಸ್ ಯೂನಿವರ್ಸ್ ಇಂಡಿಯಾ ಗೆಲುವಿನ ಬಗ್ಗೆ ರಿಯಾ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಪ್ರಶಸ್ತಿಯನ್ನು ಗೆದ್ದಿದ್ದೇನೆ. ನಾನು ತುಂಬಾ ಕೃತಜ್ಞಳಾಗಿದ್ದೇನೆ. ಈ ಮಟ್ಟಕ್ಕೆ ಹೋಗಲು ನಾನು ತುಂಬಾ ಕೆಲಸ ಮಾಡಿದ್ದೇನೆ. ಈ ಕಿರೀಟಕ್ಕೆ ನಾನು ಸಾಕಷ್ಟು ಅರ್ಹಳೆಂದು ಪರಿಗಣಿಸಬಹುದು. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ ಎಂದು ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.