back to top
20.8 C
Bengaluru
Saturday, August 30, 2025
HomeKarnatakaದುಷ್ಕರ್ಮಿಗಳ ಗುಂಡಿನ ದಾಳೆಯಲ್ಲಿ Ricky Rai ಗಂಭೀರವಾಗಿ ಗಾಯ: ಕುತಂತ್ರದ ಶಂಕೆ

ದುಷ್ಕರ್ಮಿಗಳ ಗುಂಡಿನ ದಾಳೆಯಲ್ಲಿ Ricky Rai ಗಂಭೀರವಾಗಿ ಗಾಯ: ಕುತಂತ್ರದ ಶಂಕೆ

- Advertisement -
- Advertisement -

Ramanagaram: ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ (Ricky Rai) ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ರಾಮನಗರದ ಬಿಡದಿ ಬಳಿ ನಡೆದಿದೆ. ರಾತ್ರಿ 11:30ರ ಸುಮಾರಿಗೆ ಈ ದಾಳಿ ನಡೆದಿದೆ.

ರಿಕ್ಕಿ ರೈ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸಾಮಾನ್ಯವಾಗಿ ತಾವೇ ಕಾರು ಓಡಿಸುತ್ತಿದ್ದ ಅವರು, ಈ ಬಾರಿ ಡ್ರೈವರ್‌ಗೆ ವಾಹನ ಚಲಾಯಿಸಲು ಕೊಟ್ಟಿದ್ದು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಿಕ್ಕಿ ರೈ ಮೂಗು ಮತ್ತು ಕೈಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚಿನ ವಿವರಗಳು

  • ದಾಳಿ ರಿಕ್ಕಿ ರೈ ಮನೆ ಸಮೀಪವೇ ನಡೆದಿದ್ದು, ದುಷ್ಕರ್ಮಿ ಕಾಂಪೌಂಡ್‌ನಲ್ಲಿ ಲುಕ್ ಆಗಿ ಶಾಟ್‌ಗನ್ ಬಳಸಿ 70mm ಬೌಲಟ್‌ಗಳಿಂದ ಫೈರಿಂಗ್ ಮಾಡಿದ್ದಾರೆ.
  • ಕಾರಿನ ಡೋರ್ ಹಾಗೂ ಸೀಟುಗಳಿಗೆ ಗುಂಡು ತಾಗಿದ್ದು, ರಿಕ್ಕಿ ರೈ ಮತ್ತು ಚಾಲಕನಿಗೆ ಗಾಯವಾಗಿದೆ.
  • ಈ ಘಟನೆಯು ಪೂರ್ವ ಯೋಜಿತ ಸಂಚು ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ದುಷ್ಕರ್ಮಿ ಶಾರ್ಪ್ ಶೂಟರ್ ಆಗಿದ್ದ ಸಾಧ್ಯತೆ ಇದೆ.
  • ಸ್ಥಳದಿಂದ ಎರಡು ಗುಂಡುಗಳು ಹಾಗೂ ಒಂದು ಮೊಬೈಲ್ ಪೋನ್ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page