Home News China ದಲ್ಲಿ Robot ಆಟಗಾರರು Football ಆಡುವ ಹೊಸ ಯುಗ

China ದಲ್ಲಿ Robot ಆಟಗಾರರು Football ಆಡುವ ಹೊಸ ಯುಗ

Robots play football in China

Beijing, China: ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ದಿನದಿಂದ ದಿನಕ್ಕೆ ಅಚ್ಚರಿ ಹುಟ್ಟಿಸುವ ಸಾಧನೆಗಳನ್ನು ತೋರಿಸುತ್ತಿದೆ. ಇತ್ತೀಚೆಗಷ್ಟೇ ಚೀನಾದಲ್ಲಿ AI ಚಾಲಿತ ಹುಮನಾಯ್ಡ್ ರೋಬೋಟ್‌ಗಳು football ಆಟದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಬೆರಗಾಗಿಸಿವೆ.

ಶನಿವಾರ ಬೀಜಿಂಗ್‌ನಲ್ಲಿ ನಡೆದ 3-ಆನ್-3 ಫುಟ್ಬಾಲ್ ಪಂದ್ಯದಲ್ಲಿ ನಾಲ್ಕು ರೋಬೋಟ್ ತಂಡಗಳು ಕಣಕ್ಕಿಳಿದಿದ್ದವು. ಈ ಪಂದ್ಯ ಭವಿಷ್ಯದಲ್ಲಿ ನಡೆಯಲಿರುವ ವಿಶ್ವ ಹುಮನಾಯ್ಡ್ ರೋಬೋಟ್ ಕ್ರೀಡಾಕೂಟದ ಪೂರ್ವವೀಕ್ಷಣೆ ಎಂಬಂತಿತ್ತು.

ಈ ಪಂದ್ಯದಲ್ಲಿ ಸಂಪೂರ್ಣವಾಗಿ ಎಐ ತಂತ್ರಜ್ಞಾನ ಬಳಸಲಾಗಿದೆ. ಯಾವುದೆ ಮಾನವ ನಿರ್ದೇಶನೆಯಿಲ್ಲದೆ, ರೋಬೋಟ್‌ಗಳು ಬಾಲ್‌ನ್ನು ಗುರುತಿಸಿ ಆಟವಾಡಿದವು. ಆಟದ ವೇಳೆ ಬಿದ್ದ ರೋಬೋಟ್‌ಗಳು ಸ್ವತಃ ಎದ್ದು ಮತ್ತೆ ಆಟ ಮುಂದುವರೆಸಿದವು, ಕೆಲವರು ಸ್ಟ್ರೆಚರ್‌ನ ಮೂಲಕ ಹೊರಕ್ಕೆ ತೆಗೆದುಕೊಳ್ಳಲ್ಪಟ್ಟರು.

ಚೀನಾದ ಬೂಸ್ಟರ್ ರೊಬೊಟಿಕ್ಸ್ ಸಂಸ್ಥೆಯು ಈ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಸಂಸ್ಥೆಯ ಮುಖ್ಯಸ್ಥ ಚೆಂಗ್ ಹಾವೊ ಅವರು ರೋಬೋಟ್‌ಗಳ ಸುರಕ್ಷತೆ ಮುಖ್ಯವಾಗಿದೆ ಎಂದರು. ಭವಿಷ್ಯದಲ್ಲಿ ಮನುಷ್ಯರು ಮತ್ತು ರೋಬೋಟ್‌ಗಳು ಒಂದೇ ತಂಡವಾಗಿ ಆಟವಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ಬೂಸ್ಟರ್ ಸಂಸ್ಥೆ ನಾಲ್ಕು ವಿಶ್ವವಿದ್ಯಾಲಯ ತಂಡಗಳಿಗೆ hardware ಒದಗಿಸಿದ್ದು, ಪ್ರತಿಯೊಂದು ತಂಡವೂ ತಮ್ಮದೇ ಆದ ತಂತ್ರಜ್ಞಾನವನ್ನು ರೂಪಿಸಿಕೊಂಡು ಆಟಗಾರರ ನಡೆನಡೆದಿಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನೀಡಿದೆ.

ಅಂತಿಮ ಪಂದ್ಯದಲ್ಲಿ ತ್ಸಿಂಗುವಾ ವಿಶ್ವವಿದ್ಯಾಲಯದ ತಂಡ, ಚೀನಾ ಕೃಷಿ ವಿಶ್ವವಿದ್ಯಾಲಯದ ತಂಡವನ್ನು 5–3 ಅಂಕಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಚೀನಾದಲ್ಲಿ AI ಚಾಲಿತ ರೋಬೋಟ್‌ಗಳು ಕ್ರೀಡಾ ಲೋಕದಲ್ಲೂ ಕಾಲಿಟ್ಟಿದ್ದು, ಇದು ತಂತ್ರಜ್ಞಾನದ ಭವಿಷ್ಯದಲ್ಲಿ ಹೊಸ ಅಧ್ಯಾಯವೆಂದು ಹೇಳಬಹುದು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version