ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma and Virat Kohli) ಈ ವರ್ಷಾಂತ್ಯದಲ್ಲಿ ಒಡೆಯನೇ ಏಕದಿನ ಕ್ರಿಕೆಟ್ ಪಂದ್ಯದಿಂದ ವಿದಾಯ ಹೇಳಬಹುದು. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಅವರಿಗೆ ವಿಶೇಷ ಬೀಳ್ಕೊಡುಗೆ ನೀಡಲು ಪ್ಲ್ಯಾನ್ ರೂಪಿಸಿದೆ. ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಈ ಗೌರವ ಸಲ್ಲಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಟಾಡ್ ಗ್ರೀನ್ಬರ್ಗ್ ತಿಳಿಸಿದ್ದಾರೆ.
ಈ ಸರಣಿಯು ಇಬ್ಬರ ಕೊನೆಯ ಆಸ್ಟ್ರೇಲಿಯಾ ಸರಣಿ ಆಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ವಿಶೇಷ ಬೀಳ್ಕೊಡುಗೆ ನೀಡಲು ಯೋಜಿಸುತ್ತಿದೆ. ಅಕ್ಟೋಬರ್ ನಲ್ಲಿ ನಡೆಯುವ ಮೂರು ಪಂದ್ಯಗಳಲ್ಲಿ ಅವರು ಗೌರವಿಸಲ್ಪಡುತ್ತಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಾದ ಬಳಿಕ ರೋಹಿತ್ ಮತ್ತು ವಿರಾಟ್ 2027ರ ಏಕದಿನ ವಿಶ್ವಕಪ್‌ಗೆ ಮುಂದುವರಿಯುವರಾ? ಎಂಬ ಪ್ರಶ್ನೆ ಏಳಿದೆ. 2027 ರ ವೇಳೆಗೆ ರೋಹಿತ್ 40 ವರ್ಷ ಮತ್ತು ವಿರಾಟ್ 38 ವರ್ಷ ಪ್ರಾಯದವರಾಗಿದ್ದಾರೆ.
ಹೀಗಾಗಿ ಮುಂಬರುವ ಏಕದಿನ ಸರಣಿಗಳು ಅವರ ಭವಿಷ್ಯ ನಿರ್ಣಾಯಕವಾಗಬಹುದು. ಆಸ್ಟ್ರೇಲಿಯಾ ವಿರುದ್ಧ ನಡೆಯುವ 3 ಪಂದ್ಯಗಳ ನಂತರ ಅವರ ಏಕದಿನ ತಂಡದಲ್ಲಿರುವ ಸ್ಥಾನ ತೀರ್ಮಾನವಾಗುತ್ತದೆ. 2027ರ ಏಕದಿನ ವಿಶ್ವಕಪ್ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಆಫ್ರಿಕಾದ ವೇಗದ ಪಿಚ್‌ಗಳು ಹಾಗೂ ಆಸ್ಟ್ರೇಲಿಯಾದ ಸೀಮ್ ಪಿಚ್‌ಗಳಲ್ಲಿ ಅವರ ಪ್ರದರ್ಶನ ಯಶಸ್ವಿಯಾಗದಿದ್ದರೆ, ತಂಡದಿಂದ ಹೊರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಟೀಮ್ ಇಂಡಿಯಾ ಮುಂಬರುವ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಇಬ್ಬರು ತಂಡದಲ್ಲಿರಲು ಸಾಧ್ಯ. ವಿಫಲವಾದರೆ, ಅಕ್ಟೋಬರ್ 25 ರಂದು ನಡೆಯುವ ಕೊನೆಯ ಪಂದ್ಯ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಬಹುದು.
- ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ದಿನಾಂಕಗಳು
- ಮೊದಲ ಪಂದ್ಯ: ಅಕ್ಟೋಬರ್ 19
- ಎರಡನೇ ಪಂದ್ಯ: ಅಕ್ಟೋಬರ್ 23, ಅಡಿಲೇಡ್
- ಕೊನೆಯ ಪಂದ್ಯ: ಅಕ್ಟೋಬರ್ 25, ಸಿಡ್ನಿ