Delhi: “ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಸೃಷ್ಟಿ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ.
ಶನಿವಾರ (ಜುಲೈ 12) ರಂದು ಪ್ರಧಾನಿ ಮೋದಿ ಅವರು 16ನೇ ರೋಜ್ಗಾರ್ ಮೇಳದಲ್ಲಿ (Rojgar Mela) ಭಾಗವಹಿಸಿ, 51,000 ಕ್ಕೂ ಹೆಚ್ಚು ಯುವಕರಿಗೆ ವರ್ಚುಯಲ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿದರು. ಅವರು “ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳು, 10 ಕೋಟಿಗೂ ಹೆಚ್ಚು ಹೊಸ ಅಡುಗೆ ಅನಿಲ ಸಂಪರ್ಕ, ಸೌರಶಕ್ತಿ ಮೇಲ್ಛಾವಣಿ ಯೋಜನೆ ಮತ್ತು ಲಕ್ಷಾಂತರ ಉದ್ಯೋಗಾವಕಾಶಗಳನ್ನು ನಾವು ಸೃಷ್ಟಿಸಿದ್ದೇವೆ” ಎಂದು ಹೇಳಿದರು.
“ಹಿಂದಿನ 10 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಮೇಲ್ಮಟ್ಟಕ್ಕೆ ಬರಲು ಸಾಧ್ಯವಾಯಿತು. ಉತ್ಪಾದನೆ ಮತ್ತು ಉದ್ಯೋಗದ ಅವಕಾಶಗಳು ಹೆಚ್ಚಿದ್ದು, ಜನರ ಆದಾಯದ ಮಟ್ಟವೂ ಏರಿದೆ” ಎಂದು ಮೋದಿ ಹೇಳಿದರು.
ವಿದ್ಯುತ್ ಉತ್ಪಾದನೆ 11 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ. ಮೊಬೈಲ್ ತಯಾರಿಕಾ ಘಟಕಗಳು 2ರಿಂದ 300ಕ್ಕೆ ಏರಿವೆ.
“ಆಪರೇಷನ್ ಸಿಂಧೂರ್ ನಂತರ ರಕ್ಷಣಾ ಉತ್ಪಾದನೆ ವ್ಯಾಪಕವಾಗಿ ಹೆಚ್ಚಾಗಿದೆ. ಇದರ ಮೌಲ್ಯ 1.25 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ” ಎಂದು ಅವರು ಹೇಳಿದರು.
ಈ ನೇಮಕಾತಿದಾರರಲ್ಲಿ ರೈಲ್ವೆ, ಗೃಹ ವ್ಯವಹಾರ, ಅಂಚೆ, ಆರೋಗ್ಯ, ಹಣಕಾಸು ಸೇವೆಗಳು, ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸೇರಿದಂತೆ ಹಲವಾರು ಕೇಂದ್ರ ಸರ್ಕಾರದ ಇಲಾಖೆಗಳಿವೆ.
ಏಪ್ರಿಲ್‌ನಲ್ಲಿ ನಡೆದ 15ನೇ ರೋಜ್ಗಾರ್ ಮೇಳದಲ್ಲಿ 6,677 ನೇಮಕಾತಿ ಪತ್ರಗಳು ವಿತರಿಸಲಾಯಿತು.