ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋ ರೂಟ್ (Joe Root) 150 ರನ್ ಸಿಡಿಸಿ ಇತಿಹಾಸದ 10 ದಾಖಲೆಗಳನ್ನು ಬರೆದಿದ್ದಾರೆ. 248 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ಸಹಾಯದಿಂದ ಶತಕ ಹೊಡೆದ ರೂಟ್, ಇಂಗ್ಲೆಂಡ್‌ನನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಮುರಿದರು.
ರೂಟ್ ಬರೆದ ಪ್ರಮುಖ ದಾಖಲೆಗಳು
- ವಿಶ್ವದ 2ನೇ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ – ರೂಟ್ ಈಗ 13,409 ರನ್ ಗಳಿಸಿ, ರಿಕಿ ಪಾಂಟಿಂಗ್, ದ್ರಾವಿಡ್, ಕಾಲಿಸ್ ಅವರನ್ನು ಹಿಂದಿಕ್ಕಿ, ಸಚಿನ್ ಬಳಿಕ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
- ಒಲ್ಡ್ ಟ್ರಾಫರ್ಡ್‌ನಲ್ಲಿ 1000+ ಟೆಸ್ಟ್ ರನ್ ಹೊಡೆದ ಮೊದಲ ಇಂಗ್ಲೀಷ್ ಆಟಗಾರ – 22ನೇ ರನ್ ತಲುಪುತ್ತಿದ್ದಂತೆಯೇ ಈ ಮೈಲಿಗಲ್ಲು ತಲುಪಿದರು.
- ಇಂಗ್ಲೆಂಡ್‌ನಲ್ಲಿ 2 ಮೈದಾನಗಳಲ್ಲಿ 1000+ ರನ್ ಬಾರಿಸಿದ ಮೂರನೇ ಆಟಗಾರ – ಲಾರ್ಡ್ಸ್ (2166), ಓಲ್ಡ್ ಟ್ರಾಫರ್ಡ್ (1128).
- ಭಾರತ ವಿರುದ್ಧ ಟೆಸ್ಟ್‌ನಲ್ಲಿ 12 ಶತಕಗಳು – ಇಂತಹ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ.
- ತವರಿನಲ್ಲಿ ಎದುರಾಳಿಯ ವಿರುದ್ಧ 9 ಶತಕಗಳು – ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ 9 ಶತಕಗಳು. ಡಾನ್ ಬ್ರಾಡ್ಮನ್ 8 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
- ಕುಮಾರ್ ಸಂಗಕ್ಕಾರರ 38 ಶತಕ ದಾಖಲೆ ಸಮಾನಗೊಳಿಸಿದರು – ಶತಕಗಳ ಸಂಖ್ಯೆಯಲ್ಲಿ ಈಗ ಜೋ ರೂಟ್ ಅವರಿಗು 38.
- ಒಂದೇ ತಂಡದ ವಿರುದ್ಧ ಇಂಗ್ಲೆಂಡ್ ಆಟಗಾರನಾಗಿ ಹೆಚ್ಚು ಶತಕ – 12 ಶತಕಗಳೊಂದಿಗೆ ಜ್ಯಾಕ್ ಹಾಬ್ಸ್ ಅವರ ದಾಖಲೆಗೆ ಸಮಾನ.
- ತವರಿನಲ್ಲಿ 23ನೇ ಟೆಸ್ಟ್ ಶತಕ – ಪಾಂಟಿಂಗ್, ಕಾಲಿಸ್, ಜಯವರ್ಧನೆ ಜೊತೆಗಿನ ಗರಿಷ್ಠ ಶತಕದ ದಾಖಲೆಗೆ ರೂಟ್ ಸೇರಿದ್ದಾರೆ.
- ಒಬ್ಬ ಬೌಲರ್ ವಿರುದ್ಧ ಹೆಚ್ಚು ಟೆಸ್ಟ್ ರನ್ – ಜಡೇಜಾ ವಿರುದ್ಧ 588 ರನ್ ಗಳಿಸಿ, ಸ್ಟೀವ್ ಸ್ಮಿತ್ (577 vs ಬ್ರಾಡ್) ಅನ್ನು ಹಿಂದಿಕ್ಕಿದರು.
- ಇಂಗ್ಲೆಂಡ್‌ನಲ್ಲಿ 7195 ಟೆಸ್ಟ್ ರನ್ – ಜಯವರ್ಧನೆ (7167 – ಶ್ರೀಲಂಕಾ) ರನ್ ದಾಖಲೆ ಮೀರಿ, ಸಚಿನ್ (7216 – ಭಾರತ), ಪಾಂಟಿಂಗ್ (7578 – ಆಸ್ಟ್ರೇಲಿಯಾ) ಮಾತ್ರ ಮುಂದೆ.
ಜೋ ರೂಟ್ ಅವರ ಈ ಭರ್ಜರಿ ಶತಕ ಭಾರತ ವಿರುದ್ಧ ಇಂಗ್ಲೆಂಡ್‌ಗೆ ಬಲ ನೀಡಿದಷ್ಟೇ ಅಲ್ಲ, ಕ್ರಿಕೆಟ್ ಇತಿಹಾಸದಲ್ಲೂ ಅಚ್ಚಳಿಯ ಸಾಧನೆಗಳನ್ನು ದಾಖಲಿಸಿದೆ. ಪಾಂಟಿಂಗ್ (ಆಸ್ಟ್ರೇಲಿಯಾದಲ್ಲಿ 7578) ಮತ್ತು ತೆಂಡೂಲ್ಕರ್ (ಭಾರತದಲ್ಲಿ 7216) ಮಾತ್ರ ರೂಟ್ಗಿಂತ ಮುಂದಿದ್ದಾರೆ.