back to top
24.7 C
Bengaluru
Monday, October 13, 2025
HomeKarnatakaಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕರ ಶಾಲೆಯಲ್ಲಿ RSS ಬೈಠಕ್ ಮತ್ತು ಪಥಸಂಚಲನ

ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕರ ಶಾಲೆಯಲ್ಲಿ RSS ಬೈಠಕ್ ಮತ್ತು ಪಥಸಂಚಲನ

- Advertisement -
- Advertisement -

Kalaburagi: ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದಲ್ಲಿ RSS ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಆದರೆ ಅವರದೇ ತವರು ಜಿಲ್ಲೆ ಕಲಬುರಗಿಯಲ್ಲಿ, ಅವರ ಪಕ್ಷದ ಶಾಸಕರೊಬ್ಬರ ಒಡೆತನದ ಶಾಲೆಯಲ್ಲಿ ಭಾನುವಾರ RSS ಬೈಠಕ್ ಮತ್ತು ಪಥಸಂಚಲನ ನಡೆಸಲಾಗಿದೆ.

ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಒಡೆತನದ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅನುದಾನಿತ ಶಾಲೆಯ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು.

ಶಾಲೆ ಸಾರ್ವಜನಿಕ ಸ್ವತ್ತು ಎಂದು ಅವರು ಹೇಳಿದ್ದಾರೆ. “ಇಲ್ಲಿಯವರೆಗೆ ಎಲ್ಲಾ ಪಕ್ಷದವರಿಗೆ ಕಾರ್ಯಕ್ರಮ ಮಾಡಲು ಅವಕಾಶ ನೀಡಿದ್ದೇವೆ. ನಮ್ಮ ಮನಸ್ಥಿತಿ ದ್ರಾವಿಡ ಮತ್ತು ಬುಡಕಟ್ಟು. ಆದರೆ RSS ಅವರ ಉದ್ದೇಶ ಬೇರೆ, ಅವರು ನಡೆಯುತ್ತಿರುವ ರೀತಿಯೇ ಬೇರೆ,” ಎಂದು ಪಾಟೀಲ್ ಹೇಳಿದರು.

ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಎಂ.ವೈ. ಪಾಟೀಲ್ “RSS ಉದ್ದೇಶ ಸರಿಯಲ್ಲ, ಆದರೆ ಸ್ವಾತಂತ್ರ್ಯಕ್ಕಾಗಿ ಅವರಲ್ಲೂ ಕೆಲವರು ಶ್ರಮಿಸುತ್ತಿರಬಹುದು. ತಿರಂಗಾ ಬಾವುಟ ಹಿಡಿದ್ರೆ ಸ್ವಾಗತ, ಲಾಠಿ ಹಿಡಿದು ಪಥಸಂಚಲನ ಮಾಡಿದರೆ ಖಂಡಿಸುತ್ತೇವೆ” ಎಂದು ಹೇಳಿದರು.

ಪಾಟೀಲ್ ಅವರು RSS ಬಗ್ಗೆ ಹೇಳಿದ್ದು, “ಕೇಂದ್ರ ಕಚೇರಿಯ ಮೇಲೆ ತಿರಂಗಾ ಬಾವುಟ ಹಾರಿಸುವುದಿಲ್ಲ. ಈ ಸಂಘಟನೆ ದೇಶ ಕಟ್ಟಲು ಅಲ್ಲ, ಬದಲಾಗಿ ದೇಶ ಒಡೆಯಲು ಕಾರ್ಯನಿರತ” ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆ ರಾಜ್ಯದಾದ್ಯಂತ ಸಂಘದ ಪಥಸಂಚಲನ ನಡೆಯುತ್ತಿದೆ. ಈ ನಡುವೆ, ಪ್ರಿಯಾಂಕ್ ಖರ್ಗೆ ನಿಷೇಧಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ, ಅವರ ಪಕ್ಷದ ಶಾಸಕರ ಶಾಲೆಯಲ್ಲಿ RSS ಕಾರ್ಯಕ್ರಮ ನಡೆಯಿರುವುದು ಚರ್ಚೆಗೆ ಕಾರಣವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page