Bengaluru: ಸಿಎಂ ಸಿದ್ದರಾಮಯ್ಯ ಗಾಂಧಿ ಕುಟುಂಬವನ್ನು ಮೆಚ್ಚಿಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು RSS ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (Ashok) ಆರೋಪಿಸಿದ್ದಾರೆ.
ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿದ ಅಶೋಕ್ ಅವರು, ಸಿಎಂ ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಡಲು ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ನಿಷ್ಠೆ ತೋರಿಸಲು RSS ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅವರು RSS ಬಗ್ಗೆ ಇತಿಹಾಸದಲ್ಲೇ ಮಹನೀಯರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನೆನಪಿಸಿದರು. ಗಾಂಧೀಜಿ, ಅಂಬೇಡ್ಕರ್, ನೆಹರೂ, ಪ್ರಣಬ್ ಮುಖರ್ಜಿ ಮುಂತಾದವರು RSS ಸೇವೆಗಳನ್ನು ಗುರುತಿಸಿರುವ ಉದಾಹರಣೆಗಳನ್ನು ನೀಡಿದರು.
ಅಶೋಕ್ ಅವರ ಪ್ರಕಾರ, ಕಾಂಗ್ರೆಸ್ ಪಕ್ಷ RSS ವಿರುದ್ಧ ದಶಕಗಳಿಂದ ಅಪಪ್ರಚಾರ ನಡೆಸುತ್ತಿದ್ರೂ ಜನರ ಗೌರವ, ಅಭಿಮಾನ ಮಾತ್ರ ಹೆಚ್ಚುತ್ತಿದೆ. “RSS ಬಗ್ಗೆ ನಿಂದನೆ ಮಾಡಿದರೆ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಹೈಕಮಾಂಡ್ ಸಂತೋಷ ಪಡಬಹುದು. ಆದರೆ ದೇಶಭಕ್ತ ಸಂಘಟನೆಗೆ ನಿಂದನೆ ಮಾಡುವುದು ಜನರೇ ಕ್ಷಮಿಸುವುದಿಲ್ಲ” ಎಂದು ಹೇಳಿದ್ದಾರೆ.