
Bengaluru: RSS ಶಾಂತಿಯುತವಾಗಿ ದೇಶ ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ (Sunil Ambekar) ಹೇಳಿದರು.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಿಎಂ ಸಿದ್ದರಾಮಯ್ಯ ಅವರ “RSS ಹಿಂಸೆಗೆ ಕಾರಣ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ನಮ್ಮ ಸ್ವಯಂಸೇವಕ ಸಂಘ ಶಾಂತಿಯುತವಾಗಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇದು ಮೊದಲಿನಿಂದಲೂ ಹೀಗೆಯೇ ನಡೆಯುತ್ತಿದೆ” ಎಂದು ಅಂಬೇಕರ್ ಸ್ಪಷ್ಟಪಡಿಸಿದರು.
ಮಾರ್ಚ್ 30ರಂದು ಪ್ರಧಾನಿ ನರೇಂದ್ರ ಮೋದಿ RSS ಕೇಂದ್ರ ಕಚೇರಿಗೆ ಭೇಟಿ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿಯೂ ಭೇಟಿ ನೀಡಿದ್ದರು. ಇದರಲ್ಲಿ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ” ಎಂದರು.
ಔರಂಗಜೇಬ್ ಈಗಿನ ಕಾಲಕ್ಕೆ ಸಂಬಂಧಿಸಿದ್ದಾನಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಅವರು ಇಂದಿಗೆ ಪ್ರಸ್ತುತನಲ್ಲ” ಎಂದು ಹೇಳಿದರು. ಯಾವುದೇ ರೀತಿಯ ಹಿಂಸೆಗೆ ಪ್ರೋತ್ಸಾಹ ನೀಡುವುದಿಲ್ಲ ಎಂಬುದಾಗಿ ಕೂಡ ಹೇಳಿದರು.
ಮಾರ್ಚ್ 21 ರಿಂದ 23 ರ ವರೆಗೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಂಘಟನೆಯ ಚಟುವಟಿಕೆಗಳು, ಭವಿಷ್ಯದ ಕಾರ್ಯತಂತ್ರ, ಮತ್ತು ಪ್ರಮುಖ ನೀತಿಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ಸಭೆಯಲ್ಲಿ ಡಾ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ, ಅಮಿತ್ ಶಾ, ಮತ್ತು ಜೆಪಿ ನಡ್ಡಾ ಭಾಗವಹಿಸಲಿದ್ದಾರೆ.
ಸಂಘದ 100 ವರ್ಷದ ಆಚರಣೆಯ ಭಾಗವಾಗಿ, ಸಮಾಜದ ಎಲ್ಲರಿಗೂ ತಲುಪುವ ಕಾರ್ಯವನ್ನು ಪ್ರಮುಖವಾಗಿ ಕೈಗೊಳ್ಳಲಾಗುತ್ತದೆ. ಎರಡು ಪ್ರಮುಖ ವಿಷಯಗಳಾದ ಬಾಂಗ್ಲಾದೇಶ ಸಂಬಂಧಿತ ವಿಚಾರ ಮತ್ತು ಸಂಘದ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ.