Search
WhatsApp alerts

Home › Karnataka

Bengaluru ನಲ್ಲಿ ಆಟೋಗಳ ಮೇಲೆ RTO ಅಧಿಕಾರಿಗಳ ದಾಳಿ

administrator · Published

RTO officials raid autos in Bengaluru

Bengaluru: ಸರ್ಕಾರ ರ್ಯಾಪಿಡೋ ಹಾಗೂ ಉಬರ್ (Rapido and Uber) ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿದ್ದ ಬಳಿಕ, ಕೆಲವು ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಇದರಿಂದ ನಿಗಾದರ ಮೀರಿ ದುಡ್ಡು ತೆಗೆದುಕೊಳ್ಳುತ್ತಿರುವ ಆಟೋಗಳ ವಿರುದ್ಧ RTO ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿ 100ಕ್ಕಿಂತ ಹೆಚ್ಚು ಆಟೋಗಳನ್ನು ಜಪ್ತಿ ಮಾಡಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಹೆಚ್ಚಿದ ದರಕ್ಕೆ ಜನರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ RTO ಅಧಿಕಾರಿಗಳಿಗೆ ದಾಳಿಗೆ ಸೂಚನೆ ನೀಡಿದ್ದರು. ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದ ಚಾಲಕರ ಲೈಸೆನ್ಸ್ ರದ್ದುಪಡಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ ಅವರು, “ಜನರಿಂದ ದರ ಹೆಚ್ಚಿದ ಬಗ್ಗೆ ದೂರು ಬಂದಿದೆ. ಇಂದು ಬೆಳಗ್ಗೆಯಿಂದ ದಾಳಿ ನಡೆಸಿದ್ದು, ಈಗಾಗಲೇ 100ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಲಾಗಿದೆ,” ಎಂದಿದ್ದಾರೆ. ದುಪ್ಪಟ್ಟು ದರ ವಸೂಲಿಗೆ ಸಂಬಂಧಿಸಿದಂತೆ 250ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಷ್ಟೇ ಅಲ್ಲದೆ, ಕೆಲ ಆಟೋಗಳಲ್ಲಿ ಪರ್ಮಿಟ್ ಅಥವಾ ಇನ್ಶೂರೆನ್ಸ್ ದಾಖಲೆಗಳೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಕೇವಲ 5% ಸೇವಾ ಶುಲ್ಕವನ್ನಷ್ಟೇ ಅಗ್ರಿಗೇಟರ್ ಆ್ಯಪ್‌ಗಳು ವಸೂಲಿಸಬಹುದು, ಆದರೆ ಹೆಚ್ಚು ಹಣ ಕೇಳುವುದಕ್ಕೆ ಅವರಿಗೆ ಅಧಿಕಾರವಿಲ್ಲ ಎಂದಿದ್ದಾರೆ.

ರೂಪಾ ಎಂಬ ಪ್ರಯಾಣಿಕರು ತಮ್ಮ ಅನುಭವ ಹಂಚಿಕೊಂಡು, “ರ್ಯಾಪಿಡೋ ಆ್ಯಪ್‌ನಲ್ಲಿ BEHS ರಿಂದ ಬಜಾಜ್ ಪಾಪ್ಯುಲರ್ ವರೆಗೆ ಆಟೋ ಬುಕ್ ಮಾಡಿದ್ದೆ. 1 ಕಿಮೀ ದೂರಕ್ಕೆ ಆ್ಯಪ್ 50 ರೂ. ತೋರಿಸಿತು. ಆದರೆ ಆ್ಯಪ್‌ವಿಲ್ಲದೆ ಆಟೋ ಹಿಡಿದರೆ 100 ರೂ ಕೇಳುತ್ತಾರೆ. ಮುಂಜಾನೆ 60 ರೂ. ಕೊಟ್ಟಿದ್ದೆ, ಈಗ ಆ್ಯಪ್‌ನಲ್ಲಿ 50 ರೂ. ಬಂದಿದೆ” ಎಂದಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page