Home News Ukraine ಮೇಲೆ Russia ದಿಂದ ಭಾರೀ Drones ದಾಳಿ

Ukraine ಮೇಲೆ Russia ದಿಂದ ಭಾರೀ Drones ದಾಳಿ

Russian President Vladimir Putin

Kyiv: ರಷ್ಯಾ ಮತ್ತು ಉಕ್ರೇನ್ ನಡುವೆ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇದು ಅತಿದೊಡ್ಡ ಡ್ರೋನ್ ದಾಳಿಯಾಗಿದೆ. ರಷ್ಯಾ ರಾತ್ರೋರಾತ್ರಿ ಉಕ್ರೇನ್ (Ukraine) ಮೇಲೆ 479 ಡ್ರೋನ್ ಗಳನ್ನು ಮತ್ತು 20 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.

ಈ ದಾಳಿಯಲ್ಲಿ ಉಕ್ರೇನ್ ವಾಯು ರಕ್ಷಣಾ ಪಡೆಗಳು 277 ಡ್ರೋನ್ ಗಳನ್ನು ಮತ್ತು 19 ಕ್ಷಿಪಣಿಗಳನ್ನು ತಡೆದವು. ಉಳಿದ 10 ಮಾತ್ರ ಗುರಿಯನ್ನು ತಲುಪಿದವು. ಈ ದಾಳಿಯಲ್ಲಿ ಒಬ್ಬ ವ್ಯಕ್ತಿಗೆ ಗಾಯವಾಗಿದೆ.

ಈ ದಾಳಿ ಯುದ್ಧಭೂಮಿ ಎಂಬಂತೆ ಪರಿವರ್ತನೆಗೊಂಡಿರುವ ಪೂರ್ವ ಹಾಗೂ ಈಶಾನ್ಯ ಉಕ್ರೇನ್ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ ಬೀರುವಂತಿತ್ತು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೆಲ ಭಾಗಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಇತ್ತ, ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ ರಷ್ಯಾ ತನ್ನ ದಾಳಿಗಳನ್ನು ಹೆಚ್ಚಿಸಿದೆ. ರಿವ್ನೆ ಪ್ರದೇಶದಲ್ಲಿನ ವಾಯುನೆಲೆಯಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೆ, ಉಕ್ರೇನ್ ಪಡೆಗಳು ರಷ್ಯಾದ ವಿಮಾನ ನೆಲೆಯಲ್ಲಿ ಇಬ್ಬರು ಫೈಟರ್ ಜೆಟ್‌ಗಳನ್ನು ಹೊಡೆದಿವೆ ಎಂದು ಉಕ್ರೇನ್ ಸೇನೆ ಹೇಳಿದೆ.

ಇದೇ ವೇಳೆ ಉಕ್ರೇನ್ ತನ್ನ ಡ್ರೋನ್ ದಾಳಿಗಳನ್ನು ರಷ್ಯಾದೊಳಗೆಯೂ ಮುಂದುವರೆಸಿದೆ. ರಷ್ಯಾದ 7 ಪ್ರದೇಶಗಳಲ್ಲಿ 49 ಉಕ್ರೇನಿಯನ್ ಡ್ರೋನ್ಗಳನ್ನು ತಡೆದುರುಳಿಸಲಾಗಿದೆ. ಎರಡು ಡ್ರೋನ್‌ಗಳು ಎಲೆಕ್ಟ್ರಾನಿಕ್ ಯುದ್ಧ ಉಪಕರಣ ತಯಾರಿಸುವ ಕಾರ್ಖಾನೆಯನ್ನು ಹೊಡೆದಿವೆ. ಈ ಯುದ್ಧದಲ್ಲಿ ಈಗಾಗಲೇ 12,000ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version