Home News Russia-Ukraine War: Drone ದಾಳಿಯಲ್ಲಿ ರಷ್ಯಾದ 40 ವಿಮಾನ ನಾಶ, Ukraine 12 ಸೈನಿಕರ ಸಾವು

Russia-Ukraine War: Drone ದಾಳಿಯಲ್ಲಿ ರಷ್ಯಾದ 40 ವಿಮಾನ ನಾಶ, Ukraine 12 ಸೈನಿಕರ ಸಾವು

Russia-Ukraine War

Kyiv: ರಷ್ಯಾ-ಉಕ್ರೇನ್ ನಡುವೆ (Russia-Ukraine War) ಕದನ ವಿರಾಮ ಕುರಿತ ಮಾತುಕತೆ ನಡೆಯುವ ಸಮಯದಲ್ಲೇ ಉಕ್ರೇನ್, ರಷ್ಯಾದ ಮೇಲೆ ಭಾರಿ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ರಷ್ಯಾದ ಪೂರ್ವ ಸೈಬೀರಿಯಾದಲ್ಲಿರುವ ಬೆಲಾಯ್ ವಾಯು ನೆಲೆಯ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು, 40ಕ್ಕೂ ಹೆಚ್ಚು ವಿಮಾನಗಳು ನಾಶಗೊಂಡಿವೆ ಎಂದು ಉಕ್ರೇನಿಯನ್ ಭದ್ರತಾ ಪಡೆಗಳು ತಿಳಿಸಿವೆ.

ಈ ಕಾರ್ಯಾಚರಣೆಗಾಗಿ ಉಕ್ರೇನ್ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಈ ದಾಳಿಯ ಮೇಲ್ವಿಚಾರಣೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೇ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ, ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ನ 12 ಸೈನಿಕರು ಸಾವನ್ನಪ್ಪಿದ್ದಾರೆ. ಈ ದಾಳಿ ಉಕ್ರೇನ್ ಸೇನೆಯ ತರಬೇತಿ ಶಿಬಿರದ ಮೇಲೆ ನಡೆದಿದ್ದು, 60ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಈ ಕುರಿತು ಉಕ್ರೇನ್ ಸೇನೆ ತೀವ್ರ ತೀರ್ಪು ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.

ಭಾನುವಾರ, ರಷ್ಯಾ ಸೇನೆ ಉಕ್ರೇನಿನ ಉತ್ತರದ ಸುಮಿ ಪ್ರದೇಶದ ಮತ್ತೊಂದು ಹಳ್ಳಿಯನ್ನು ವಶಪಡಿಸಿಕೊಂಡಿದೆ ಎಂದು ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ಹಳ್ಳಿಗಳು ರಷ್ಯಾದ ನಿಯಂತ್ರಣಕ್ಕೆ ಹೋಗಿವೆ. ಗಡಿಭಾಗದಲ್ಲಿ ಈಗಾಗಲೇ 50,000ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ. ಶೆಲ್ ದಾಳಿಗಳ ನಡುವೆ 200ಕ್ಕೂ ಹೆಚ್ಚು ಹಳ್ಳಿಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಶಾಂತಿ ಮಾತುಕತೆಗಾಗಿ ಉಕ್ರೇನ್ ಅವರ ಸಚಿವ ರುಸ್ಟೆಮ್ ಉಮೆರೊವ್ ನೇತೃತ್ವದ ನಿಯೋಗವನ್ನು ಇಸ್ತಾನ್ಬುಲ್‌ಗೆ ಕಳಿಸಿದೆ. ಈ ಕುರಿತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭಾನುವಾರ ತಿಳಿಸಿದ್ದು, ರಷ್ಯಾ ಜೊತೆ ಮಾತುಕತೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version