Mangaluru : ಮಂಗಳೂರಿನ ಕುದ್ಮುಲ್ ರಂಗರಾವ್ ರಂಗಮಂದಿರದಲ್ಲಿ (Kudmal Rangarao Town hall) ಮಂಗಳವಾರ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ (S. L. Bhyrappa) ಅವರ ‘ಪರ್ವ’ ಕಾದಂಬರಿ (Parva Novel) ಆಧಾರಿತ, ಮೈಸೂರಿನ ರಂಗಾಯಣ (Rangayana) ನಿರ್ಮಿಸಿದ ನಾಟಕ ‘ಪರ್ವ’ದ ಮಹಾ ರಂಗಪ್ರಯೋಗ ನಡೆಯಿತು. ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ 8 ಗಂಟೆಗಳ ಕಾಲ ನಡೆದ ಈ ಮಹಾ ಪ್ರಯೋಗಕ್ಕೆ ತುಳು ರಂಗಭೂಮಿಯ ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನಿರ್ದೇಶಕ ಡಾ. ನಾ. ದಾಮೋದರ ಶೆಟ್ಟಿ , ‘ರಂಗಾಯಣವು ಕರಾವಳಿಯ ರಂಗಕರ್ಮಿ ಬಿ.ವಿ. ಕಾರಂತರ ಸೃಷ್ಟಿ. ಅಲ್ಲಿ ಇಂಥ ಮಹತ್ವದ ಪ್ರಯೋಗಗಳು ನಡೆಯುತ್ತಿರುವುದು ಮತ್ತು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಹೆಮ್ಮೆಯ ವಿಚಾರ” ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಉಪಸ್ಥಿತರಿದ್ದರು.