back to top
22.2 C
Bengaluru
Wednesday, October 8, 2025
HomeNewsಭಾರತೀಯರಿಗೆ ಆಪತ್ತಿನ ಕಾಲದಲ್ಲಿ ರಕ್ಷಣೆಗಾಗಿ 'Sachet' App

ಭಾರತೀಯರಿಗೆ ಆಪತ್ತಿನ ಕಾಲದಲ್ಲಿ ರಕ್ಷಣೆಗಾಗಿ ‘Sachet’ App

- Advertisement -
- Advertisement -

ಬೇಸಿಗೆ ಕಾಲದಲ್ಲಿ, ನಿತ್ಯವಿರುವ ತಾಪಮಾನ ಮತ್ತು ಅಕಾಲಿಕ ಮಳೆಯೊಂದಿಗೆ ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದು ರೈತರಿಗೆ ಮತ್ತಷ್ಟು ಸಮಸ್ಯೆಗಳನ್ನುಂಟುಮಾಡುತ್ತಿದೆ, ತಾಜಾ ಉದಾಹರಣೆಗೆ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ತನ್ನ ದುಷ್ಪರಿಣಾಮಗಳನ್ನು ಉಂಟುಮಾಡಿದೆ. ಇಂತಹ ಆಪತ್ತಿನಲ್ಲಿ ಜನರನ್ನು ರಕ್ಷಿಸುವಂತಹ ‘ಸಚೇತ್’ ಆಪ್ಲಿಕೇಶನ್ (‘Sachet’ app) ಸಹಾಯ ಮಾಡುತ್ತದೆ.

ಸಚೇತ್ಆ್ಯಪ್: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ, ‘ಸಚೇತ್’ ಆಪ್ ಅನ್ನು ಪರಿಚಯಿಸಲಾಗಿದೆ. ಇದು ದೇಶಾದ್ಯಾಂತ ಎಲ್ಲರಿಗೂ ಪ್ರಕೃತಿ ವಿಕೋಪ ಹಾಗೂ ಹವಾಮಾನದ ಮುನ್ಸೂಚನೆಗಳನ್ನು ನಿಖರವಾಗಿ ಒದಗಿಸಲು ಸಹಕಾರಿಯಾಗಲಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಇದನ್ನು ಸಿದ್ಧಪಡಿಸಿ ಲೋಕಾರ್ಪಣೆ ಮಾಡಿದೆ.

ನಿಖರವಾದ ಮುನ್ಸೂಚನೆಗಳು: ‘ಸಚೇತ್’ ಆ್ಯಪ್, ಪ್ರಕೃತಿಯ ವಿಕೋಪಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತದೆ. ನೆರೆಹಾವಳಿ, ಚಂಡಮಾರುತ, ಭೂಕುಸಿತ, ಸುನಾಮಿ, ಕಾಳ್ಗಿಚ್ಚು, ಸುಂಟರಗಾಳಿ, ಗುಡುಗು-ಸಿಡಿಲು ಹಾಗೂ ಮಿಂಚು ಮುಂತಾದ ಪರಿಸ್ಥಿತಿಗಳ ಬಗ್ಗೆ ಜನರಿಗೆ ಮುನ್ಸೂಚನೆ ನೀಡುತ್ತದೆ. ಬಳಕೆದಾರರು ತಮ್ಮ ರಾಜ್ಯ ಅಥವಾ ಜಿಲ್ಲೆಯ ಮುನ್ಸೂಚನೆಗಳನ್ನು ಸಬ್ಸ್ಕ್ರೈಬ್ ಮಾಡಿಕೊಂಡು ಅಗತ್ಯವಿರುವ ಮಾಹಿತಿಯನ್ನು ಪಡೆಯಬಹುದು.

ಭಾಷೆಗಳ ವೈವಿಧ್ಯತೆ: ಈ ಆ್ಯಪ್ ಇಂಗ್ಲಿಷ್ ಭಾಷೆಯಲ್ಲಿಯೇ ಮಾತ್ರವಲ್ಲದೆ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಅಸ್ಸಾಮೀಸ್, ಮರಾಠಿ, ಬೆಂಗಾಲಿ, ಗುಜರಾತಿ, ಒಡಿಯಾ, ಪಂಜಾಬಿ ಸೇರಿದಂತೆ 11 ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಿದೆ. ಇದರಲ್ಲಿ ಭಾರತೀಯ ಹವಾಮಾನ ಇಲಾಖೆಯ ಸಮಗ್ರ ಮಾಹಿತಿ ದೊರಕುತ್ತದೆ.

ಜನರಿಗೆ ಸಹಾಯಕ್ಕಾಗಿ ಮಾಹಿತಿ: ಈ ಆ್ಯಪ್ ಬಳಕೆದಾರರಿಗೆ ಪ್ರಾಕೃತಿಕ ವಿಕೋಪ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡುತ್ತದೆ. ಪ್ರಕಾರ, ಜನರಿಗೆ “ಮಾಡಬೇಕಾದವು” ಮತ್ತು “ಮಾಡಬಾರದು” ಎಂಬ ನಿರ್ಧಾರಗಳನ್ನು ನೀಡುತ್ತೆ. ಜೊತೆಗೆ, ಹೆಲ್ಪ್ ಲೈನ್ ನಂಬರ್ ಗಳ ಸಹಾಯವನ್ನೂ ಒದಗಿಸುತ್ತದೆ.

ಆಪರೇಷನ್ ಬ್ರಹ್ಮ‘: ಪ್ರಧಾನಿ ಮೋದಿ ಅವರು, ಮ್ಯಾನ್ಮಾರ್ ನಲ್ಲಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಬ್ರಹ್ಮ’ ಕಾರ್ಯಾಚರಣೆಯನ್ನು ಸ್ಮರಿಸಿದರು. ಅಲ್ಲಿನ ಭೂಕಂಪದ ಸಂದರ್ಭದಲ್ಲಿ ಸೈನಿಕರು ಮಾನವೀಯತೆ ತೋರಿ ಅಲ್ಲಿನ ನಿರಾಶ್ರಿತರಿಗೆ ಸಹಾಯ ಮಾಡಿದ್ದಾರೆ.

‘ಸಚೇತ್’ ಆಪ್ಲಿಕೇಶನ್, ಬಿಕ್ಕಟ್ಟುಗಳ ವೇಳೆ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ ನಿಮ್ಮ ಸುರಕ್ಷತೆಯ ಹಿತಕ್ಕೆ ಕಾರ್ಯನಿರ್ವಹಿಸುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page