back to top
22.9 C
Bengaluru
Friday, July 25, 2025
HomeAutoಉಪ್ಪಿನ ಶಕ್ತಿಗೆ ಚಕ್ರಗಳು – Sodium Batteries ಯುಗ ಶುರು!

ಉಪ್ಪಿನ ಶಕ್ತಿಗೆ ಚಕ್ರಗಳು – Sodium Batteries ಯುಗ ಶುರು!

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ಬ್ಯಾಟರಿಯಿಂದ ನಡೆಯುವ ವಾಹನಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಹುತೇಕ ಇವೆಗಳಲ್ಲಿ ಲಿಥಿಯಂ ಅಯಾನ್ (Lithium-ion) ಶಕ್ತಿಯ ಬ್ಯಾಟರಿಗಳೇ ಬಳಕೆಯಲ್ಲಿವೆ. ಆದರೆ ಇದೀಗ, ಸೋಡಿಯಂ ಅಯಾನ್ (Sodium-ion) ಶಕ್ತಿಯ ಬ್ಯಾಟರಿಗಳು ಗಮನ ಸೆಳೆಯುತ್ತಿವೆ.

ಚೀನಾದ ಮುನ್ನಡೆ: ಸೋಡಿಯಂ ಅಯಾನ್ ಬ್ಯಾಟರಿ ತಂತ್ರಜ್ಞಾನದಲ್ಲಿ ಚೀನಾ ಈಗಾಗಲೇ ಮುಂಚೂಣಿಯಲ್ಲಿದೆ. ಚೀನಾದ ಕೆಲವು ನಗರಗಳಲ್ಲಿ ಈ ತಂತ್ರಜ್ಞಾನದೊಂದಿಗೆ ಸ್ಕೂಟರ್‌ಗಳನ್ನು ಮಾರುಕಟ್ಟೆಯಲ್ಲಿ 35,000 ರಿಂದ 60,000 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲಿಯ CATL ಕಂಪನಿಯು ಬಹುಮಟ್ಟಿಗೆ ಈ ಬ್ಯಾಟರಿಗಳನ್ನು ತಯಾರಿಸುತ್ತಿದೆ.

ಸೋಡಿಯಂ ಬ್ಯಾಟರಿಯ ವಿಶೇಷತೆಗಳು

  • ಉಪ್ಪಿನಿಂದ ಈ ಬ್ಯಾಟರಿ ತಯಾರಿಸಲಾಗುತ್ತದೆ, ಹೀಗಾಗಿ ದರ ಅಗ್ಗ.
  • ಚಾರ್ಜ್ ಆಗುವ ವೇಗ ಹೆಚ್ಚಾಗಿದೆ.
  • ಇಡೀ ಬ್ಯಾಟರಿಯು ಜಾಸ್ತಿ ದಿನ ನಡೆಯುತ್ತದೆ.

ಈ ಬ್ಯಾಟರಿಗಳು ಲಿಥಿಯಂ ಬ್ಯಾಟರಿಗಿಂತ ಕಡಿಮೆ ಶಕ್ತಿ ಹೊಂದಿವೆ. ಅಂದರೆ, ಒಮ್ಮೆ ಚಾರ್ಜ್ ಮಾಡಿದರೆ ಬಹಳ ದೂರ ಹೋಗುವುದಿಲ್ಲ. ತಂತ್ರಜ್ಞಾನ ಇನ್ನೂ ಬೆಳೆಯುತ್ತಿರುವ ಹಂತದಲ್ಲಿದೆ.

ಭಾರತದಲ್ಲಿಯೂ ಈ ಹೊಸ ತಂತ್ರಜ್ಞಾನ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಎನರ್ಜೆಟಿಕಾ ಹಾಗೂ ಜಿತೇಂದ್ರ ಇವಿ ಕಂಪನಿಗಳು ಶೀಘ್ರದಲ್ಲೇ ಸೋಡಿಯಂ ಶಕ್ತಿಯ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಹಲವಾರು ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page