ರಿಯಾದ್ ನಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನವು (Saudi Arabia-Pakistan) ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಮೇಲೆ ಭಾರತದ ವಿದೇಶಾಂಗ ಇಲಾಖೆ ಗಮನಹರಿಸಿದೆ. ವಕ್ತಾರ ರಂದೀರ್ ಜೈಸ್ವಾಲ್ ಅವರು ಈ ಬೆಳವಣಿಗೆಯ ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತೆಂದು ಹೇಳಿದ್ದಾರೆ. ಒಪ್ಪಂದವು ಭಾರತದ ಭದ್ರತೆ, ಪ್ರಾದೇಶಿಕ ಹಾಗೂ ಜಾಗತಿಕ ಸ್ಥಿರತೆ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೋ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರವು ದೇಶದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಮಗ್ರ ಭದ್ರತೆಯನ್ನು ಕಾಪಾಡಲು ಬದ್ಧವಾಗಿದೆ.
ಬುಧವಾರ ರಿಯಾದ್ಗೆ ತೆರಳಿದ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರನ್ನು ಸೌದಿ ಅರೇಬಿಯಾ ಮುಖ್ಯಮಂತ್ರಿ ಮತ್ತು ರಾಜಕುಮಾರ್ ಮೊಹಮ್ಮದ್ ಬಿನ್ ಸಲ್ಮಾನ್ ಆತ್ಮೀಯವಾಗಿ ಬರಮಾಡಿಕೊಂಡು, ಉಭಯ ದೇಶಗಳ ನಡುವೆ ಈ ಕಾರ್ಯತಂತ್ರದ ರಕ್ಷಣಾ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಒಪ್ಪಂದದ ಪ್ರಕಾರ, ಎರಡೂ ದೇಶಗಳಿಗೆ ಯಾವುದೇ ಆಕ್ರಮಣವಾದರೆ, ಅದನ್ನು ಪರಸ್ಪರ ದೇಶಗಳ ಮೇಲೆ ನಡೆದ ಆಕ್ರಮಣವೆಂದು ಪರಿಗಣಿಸಲಾಗುತ್ತದೆ.
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ಐತಿಹಾಸಿಕ ಸಹಭಾಗಿತ್ವ ಸಹೋದರತ್ವ ಮತ್ತು ಇಸ್ಲಾಮಿಕ್ ಒಗ್ಗಟ್ಟಿನ ಮೇಲೆ ನಿರ್ಮಿತವಾಗಿದೆ. ಈ ಒಪ್ಪಂದವು ಇಬ್ಬರ ದೇಶಗಳ ಭದ್ರತೆಯನ್ನು ಹೆಚ್ಚಿಸುವುದು, ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವುದು, ಮತ್ತು ರಕ್ಷಣಾ ಸಹಕಾರವನ್ನು ಬಲಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಹಲ್ಗಾಮ್ ದಾಳಿಯಂತಹ ಘಟನೆಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕರ ದಾಳಿಗಳನ್ನು ತೀವ್ರವಾಗಿ ಖಂಡಿಸಲಾಗಿದೆ.