ಸೌದಿ ಅರೇಬಿಯಾದ (Saudi Arabia) ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲ್ ಅಜೀಜ್ ಬಿನ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಅಲ್ ಶೇಖ್ ನಿಧನಗೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೇಖ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶೇಖ್ ಅವರ ನಿಧನವು ಸೌದಿ ಹಾಗೂ ಇಸ್ಲಾಮಿಕ್ ಜಗತ್ತಿಗೆ ಅಪಾರ ನಷ್ಟ ಎಂದು ಮೋದಿ ಹೇಳಿದ್ದಾರೆ.
ಪ್ರಮುಖ ಸೇವೆಗಳು: ಶೇಖ್ ಅಬ್ದುಲ್ ಅಜೀಜ್ ಎರಡು ದಶಕಗಳಿಗಿಂತ ಹೆಚ್ಚು ಕಾಲ ಸೌದಿ ಅರೇಬಿಯಾದ ಅತ್ಯುನ್ನತ ಧಾರ್ಮಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಹಿರಿಯ ವಿದ್ವಾಂಸ ಮಂಡಳಿ, ವಿದ್ವಾಂಸ ಸಂಶೋಧನಾ ಮಂಡಳಿ, ಇಫ್ತಾದ ಸಾಮಾನ್ಯ ಅಧ್ಯಕ್ಷತೆ ಹಾಗೂ ಮುಸ್ಲಿಂ ವರ್ಲ್ಡ್ ಲೀಗ್ ಸುಪ್ರೀಂ ಕೌನ್ಸಿಲ್ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.
ಅಸರ್ ಪ್ರಾರ್ಥನೆಯ ನಂತರ ರಿಯಾದ್ ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಶೇಖ್ ಅವರ ಅಂತ್ಯಕ್ರಿಯೆಯ ಪ್ರಾರ್ಥನೆ ನಡೆಯಲಿದೆ. ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ಶೇಖ್ ಅವರ ನೆನಪಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ.
ಸೌದಿ ರಾಜ ಸಲ್ಮಾನ್, ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಸೌದಿ ಜನತೆ ಮತ್ತು ಜಾಗತಿಕ ಮುಸ್ಲಿಂ ಸಮುದಾಯ ಶೇಖ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶೇಖ್ ಅವರು ಇಸ್ಲಾಂ ಮತ್ತು ಮುಸ್ಲಿಮರಿಗೆ ನೀಡಿದ ಕೊಡುಗೆ ಅಪಾರವೆಂದು ಹೇಳಲಾಗಿದೆ.