Search
WhatsApp alerts

Home › Featured

Savarkar ವಿವಾದ: ನ್ಯಾಯಾಲಯದ ಎದುರು Rahul gandhi ಹಾಜರು ಕಡ್ಡಾಯ!

administrator · Published

Rahul Gandhi

Pune, Maharastra : ವಿ.ಡಿ. ಸಾವರ್ಕರ್ (Savarkar) ಕುರಿತು ನೀಡಿದ ವಿವಾದಾಸ್ಪದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಮಾನನಷ್ಟ ಪ್ರಕರಣದಲ್ಲಿ, ಡಿಸೆಂಬರ್ 2ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul gandhi) ಪುಣೆ ನ್ಯಾಯಾಲಯ ಆದೇಶಿಸಿದೆ.

2023ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ರಾಹುಲ್ ಗಾಂಧಿ ನೀಡಿದ ಭಾಷಣದಲ್ಲಿ, ಸಾವರ್ಕರ್ ಅವರು ತಮ್ಮ ಸ್ನೇಹಿತರೊಂದಿಗೆ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಹಲ್ಲೆ ಮಾಡಿ ಅದಕ್ಕೆ ಸಂತೋಷಪಟ್ಟರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಆರೋಪಿಸಿದ್ದರು.

ಸಾವರ್ಕರ್ ಮೊಮ್ಮಗ ದೂರು:

ಈ ಹೇಳಿಕೆ ತಪ್ಪು ಮತ್ತು ನಿಖರ ಮಾಹಿತಿಯಿಲ್ಲದಂತಿದ್ದು, ಹಿಂದುತ್ವ ಸಿದ್ಧಾಂತದ ವಿರುದ್ಧ ಆಕ್ಷೇಪಾರ್ಹವಾಗಿದೆ ಎಂದು ಆರೋಪಿಸಿ, ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ 2023ರಲ್ಲಿ ಪುಣೆ ನ್ಯಾಯಾಲಯದಲ್ಲಿ ಮಾನನಷ್ಟ ದೂರು ದಾಖಲಿಸಿದ್ದರು.

ಸಮನ್ಸ್ ಮತ್ತು ವಿಚಾರಣೆ:

ಅಕ್ಟೋಬರ್ 4ರಂದು, ವಿಶೇಷ ನ್ಯಾಯಾಲಯವು ಅ.23ರಂದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅವರು ಸಮನ್ಸ್ ತಲುಪಿಲ್ಲ ಎಂದು ಹೇಳಿ ಹಾಜರಾಗಿಲ್ಲ.

ಸಾಮಾನ್ಯ ವಿಚಾರಣೆಯನ್ನು ಮುಂದುವರಿಸುವಂತೆ, ಡಿಸೆಂಬರ್ 2ರಂದು ಹಾಜರಾಗಲು ರಾಹುಲ್ ಗಾಂಧಿಗೆ ಹೊಸ ಸಮನ್ಸ್ ನೀಡುವಂತೆ ಸಾತ್ಯಕಿ ಸಾವರ್ಕರ್ ಪರ ವಕೀಲ ಸಂಗ್ರಾಮ್ ಕೊಲ್ನಟ್ಕರ್ ಮನವಿ ಮಾಡಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page