Bengaluru: ಭ್ರೂಣಹತ್ಯೆಗಳನ್ನು ತಡೆಯಲು ಹಲವಾರು ಜಾಗೃತಿ ಮೂಡಿಸಿದರೂ ಸಂಪೂರ್ಣ ಫಲಿತಾಂಶ ಕಾಣಿಸುತ್ತಿಲ್ಲ. ಈ ಕಾರಣಕ್ಕೆ ಹೆಣ್ಣು ಭ್ರೂಣವನ್ನು ಕಾಪಾಡಲು ಸರ್ಕಾರ ಹೊಸ ಯೋಜನೆಗಳನ್ನು ತರಲು ಮುಂದಾಗಿದೆ. ಇದೀಗ ಆಂಧ್ರ ಪ್ರದೇಶದ ಮಾದರಿಯನ್ನು ಅನುಸರಿಸಿ ಬೆಂಗಳೂರಿನಲ್ಲಿ ‘ಸೇವ್ ಮಾಮ್’ (Save Mom) ಎಂಬ ಯೋಜನೆ ಜಾರಿಗೆ ಬರಲಿದೆ.
ಏಕೆ ಈ ಯೋಜನೆ ಅಗತ್ಯ
- ಅನೇಕ ಗರ್ಭಿಣಿಯರ ಮಾಹಿತಿ (ಡಾಟಾ) ಮಿಸ್ಸಿಂಗ್ ಆಗುತ್ತಿದೆ.
- ತಾಯಿ ಕಾರ್ಡ್ ಮಾಡಿದ ನಂತರ, ನಿಯಮಿತ ತಪಾಸಣೆಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ.
- ಗರ್ಭಪಾತದ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗುತ್ತಿವೆ.
- ತಾಯಿ ಹಾಗೂ ಮಗು ಸುರಕ್ಷಿತವಾಗಿರುವರೇ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ.
ಹೇಗೆ ಕೆಲಸ ಮಾಡಲಿದೆ ‘ಸೇವ್ ಮಾಮ್’
- ಗರ್ಭಿಣಿಯರ ಮಾಹಿತಿಯನ್ನು ಆನ್‌ಲೈನ್ ಆ್ಯಪ್ ಮೂಲಕ ಆರೋಗ್ಯ ಇಲಾಖೆಯ ಪೋರ್ಟಲ್‌ಗೆ ಕಳುಹಿಸಲಾಗುತ್ತದೆ.
- ಅವರು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಅವರ ವಿವರಗಳನ್ನು ಟ್ರಾಕ್ ಮಾಡಲಾಗುತ್ತದೆ.
- ಗರ್ಭಿಣಿಯಾಗುವ ಕ್ಷಣದಿಂದ ಮಗು ಹುಟ್ಟಿ 2 ವರ್ಷದವರೆಗೂ ಎಲ್ಲಾ ಮಾಹಿತಿಯನ್ನು ಟ್ರಾಕ್ ಮಾಡಲಾಗುತ್ತದೆ.
- ಆಶಾ ಕಾರ್ಯಕರ್ತೆಯರು ಆ್ಯಪ್ ಮೂಲಕ ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.
ಈ ಯೋಜನೆ ಮೂಲಕ ಗರ್ಭಿಣಿಯರ ಮಾಹಿತಿ ಮಿಸ್ಸಿಂಗ್ ಆಗುವ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಜೊತೆಗೆ ತಾಯಿ ಮತ್ತು ಮಗುವಿನ ಸುರಕ್ಷತೆ ಕುರಿತು ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
‘ಸೇವ್ ಮಾಮ್’ ಯೋಜನೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜಾರಿಯಾದರೆ ಭ್ರೂಣಹತ್ಯೆ ತಡೆಗಟ್ಟಲು ಮಹತ್ತರ ಹೆಜ್ಜೆಯಾಗಲಿದೆ.