back to top
26.7 C
Bengaluru
Wednesday, July 30, 2025
HomeKarnatakaSBI Manager ಕನ್ನಡ ಮಾತನಾಡಲು ನಿರಾಕರಿಸಿ ವಿವಾದ: CM Siddaramaiah ಪ್ರತಿಕ್ರಿಯೆ

SBI Manager ಕನ್ನಡ ಮಾತನಾಡಲು ನಿರಾಕರಿಸಿ ವಿವಾದ: CM Siddaramaiah ಪ್ರತಿಕ್ರಿಯೆ

- Advertisement -
- Advertisement -

Bengaluru: SBI ಶಾಖಾ ಮ್ಯಾನೇಜರ್ (SBI Manager) ಕನ್ನಡ ಮಾತನಾಡಲಿಲ್ಲ ಎಂಬ ವಿಷಯಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನು ಅವರು ಖಂಡನೀಯ ಎಂದು ಹೇಳಿದ್ದಾರೆ.

ಆನೇಕಲ್ ಸೂರ್ಯನಗರದ ಮ್ಯಾನೇಜರ್ ವರ್ತನೆ ಖಂಡನೀಯವಾಗಿದೆ. ಈ ವೇಳೆ ಬ್ಯಾಂಕ್ ಆಧಿಕಾರಿಯನ್ನು ವರ್ಗಾವಣೆ ಮಾಡಿರುವ SBI ಕ್ರಮವನ್ನು ಸಿಎಂ ಮೆಚ್ಚಿದ್ದಾರೆ. ಈ ಮೂಲಕ ವಿವಾದಕ್ಕೆ ಅಂತ್ಯವಾಗಬೇಕು ಎಂದಿದ್ದಾರೆ.

ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಗೌರವದಿಂದ ವರ್ತಿಸಬೇಕು. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ಕುರಿತು ತರಬೇತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಜನರನ್ನು ಗೌರವಿಸುವಂತೆ ಎನ್ನುವ ಮಾತು ಸಿಎಂ ಹೇಳಿದ್ದಾರೆ.

ಆನೇಕಲ್ ಚಂದಾಪುರದ ಸೂರ್ಯನಗರ SBI ಮ್ಯಾನೇಜರ್ ಕನ್ನಡ ಮಾತಾಡಲಿಲ್ಲ ಎಂಬುದಾಗಿ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಯಿತು.

ಮ್ಯಾನೇಜರ್ “RBI ನಲ್ಲಿ ಕನ್ನಡ ಮಾತಾಡಬೇಕೆಂದು ಯಾವುದೇ ನಿಯಮ ಇಲ್ಲ” ಎಂದು ಸವಾಲು ಹಾಕಿದ್ದರು. ಈ ಮಾತುಗಳು ಸಹ ವಿಡಿಯೋ ಮೂಲಕ ವೈರಲಾಯಿತು.

ಬ್ಯಾಂಕ್ ಶಾಖೆಗಳಲ್ಲಿ ಪರಭಾಷಿಗರಿರುವುದರಿಂದ ಸ್ಥಳೀಯರಿಗೆ ಬ್ಯಾಂಕ್ ಸೇವೆಗಳು ಸರಿ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುಂಚೆ ತಹಶೀಲ್ದಾರ್ ಎಲ್ಲ ಬ್ಯಾಂಕ್ ಮ್ಯಾನೇಜರ್‌ರನ್ನು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವಂತೆ ಸಭೆಯಲ್ಲಿ ಸೂಚಿಸಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page