Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಹಿತಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಅವರ ಸರ್ಕಾರದಲ್ಲೇ ಎಸ್ಸಿ/ಎಸ್ಟಿ (SC/ST) ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
SC/ST ನೌಕರರ ಮುಂಬಡ್ತಿಯಲ್ಲಿ ಸರಿಯಾದ ನಿಯಮಗಳನ್ನು ಪಾಲನೆಯಾಗುತ್ತಿಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ತೀವ್ರವಾಗಿ ಗಮನ ಸೆಳೆದಿದ್ದಾರೆ.
SC/ST ನೌಕರರ ಸಂಘದಿಂದ ರೋಸ್ಟರ್ ನಿಯಮಾನುಸಾರ ಮುಂಬಡ್ತಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶಗಳನ್ನೆತ್ತರೆ ಎಷ್ಟೋ ಇಲಾಖೆಗಳ ಅಧಿಕಾರಿಗಳು ಅವನ್ನು ಪಾಲನೆ ಮಾಡುತ್ತಿಲ್ಲ ಎಂಬುದನ್ನು ಖರ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅವರು ಈ ಪತ್ರದೊಂದಿಗೆ ಪತ್ರಿಕೆಯ ವರದಿಗಳನ್ನೂ ಲಗತ್ತಿಸಿ, ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಇಲ್ಲದಿದ್ದರೆ ಅಧಿಕಾರಿಗಳಲ್ಲಿ ಅಸಮಾಧಾನ ಉಂಟಾಗಿ ಸರ್ಕಾರದ ಕಾರ್ಯವೈಖರಿ ತೊಂದರೆಗೆ ಒಳಗಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಒಳಗಿನ ವಿಚಾರಗಳು ಆಂತರಿಕ ವೇದಿಕೆಯಲ್ಲಿ ಮಾತ್ರ ಚರ್ಚೆಯಾಗಬೇಕು ಎಂದು ಖರ್ಗೆಯವರೇ ಇತ್ತೀಚೆಗಷ್ಟೆ ಸೂಚಿಸಿದ್ದರು. ಆದರೂ ಅವರು ಸ್ವತಃ ಈ ವಿಷಯವನ್ನು ಸಾರ್ವಜನಿಕವಾಗಿ ಪತ್ರದ ಮೂಲಕ ಪ್ರಸ್ತಾಪಿಸಿದ್ದರಿಂದ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ.