Bengaluru: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದವರ (ST) ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಮತ್ತೆ ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ.
ಎಸ್‌ಸಿ/ಎಸ್‌ಟಿ ಜನರಿಗೆ ಮಾತ್ರ ಮೀಸಲಾದ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಗಳ ಹಣವನ್ನು ಇತರ ಉಚಿತ ಯೋಜನೆಗಳಿಗೆ ಬಳಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳಡಿಯಲ್ಲಿ 2025-26ಕ್ಕೆ ಒಟ್ಟು 42,017 ಕೋಟಿ ರೂಪಾಯಿ ಅನುದಾನವಿದೆ. ಈ ಪೈಕಿ 11,896 ಕೋಟಿ ರೂಪಾಯಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲು ಚಿಂತನೆ ನಡೆಯುತ್ತಿದೆ.
ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗವಾಗುವ ಹಣ ಇಂತಿದೆ
- ಯುವನಿಧಿ – ₹162 ಕೋಟಿ
- ಗೃಹಲಕ್ಷ್ಮೀ – ₹7,438 ಕೋಟಿ
- ಗೃಹಜ್ಯೋತಿ – ₹2,626 ಕೋಟಿ
- ಶಕ್ತಿ – ₹1,537 ಕೋಟಿ
- ಅನ್ನಭಾಗ್ಯ – ₹1,670 ಕೋಟಿ
ಹೀಗಾಗಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಇತರ ಯೋಜನೆಗಳಿಗೆ ಬಳಕೆ ಮಾಡುವ ಈ ನಿರ್ಧಾರವು, ಕಳೆದ ವರ್ಷಕ್ಕೂ ಮುಂಚೆಯೇ ಟೀಕೆ ಎದುರಿಸಿದ್ದಲ್ಲದೆ, ಈ ಬಾರಿ ಮತ್ತೆ ದಲಿತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಅಧಿವೇಶನದಲ್ಲಿಯೂ ಇದೇ ವಿಷಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದ ನಡೆದಿತ್ತು.