ಒಮ್ಮೆ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಅನಿಲ್ ಅಂಬಾನಿ, (Anil Ambani) ಸಾಲ ಮತ್ತು ದಂಡದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India-SEBI) ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಗ್ರೂಪ್ ನ (Reliance Group) ಆರು ಘಟಕಗಳಿಗೆ 154.5 ಕೋಟಿ ರೂಪಾಯಿಗಳ ಪಾವತಿಗೆ ಡಿಮ್ಯಾಂಡ್ ನೋಟಿಸ್ (demand notice) ಕಳುಹಿಸಿದೆ.
ಆರು ಘಟಕಗಳಿಗೆ ತಲಾ 25.75 ಕೋಟಿ ರೂಪಾಯಿಗಳ ಪಾವತಿಗೆ ಸೂಚನೆ ನೀಡಲಾಗಿದೆ. ಸೆಬಿಯು ಈ ಮೊತ್ತವನ್ನು 15 ದಿನಗಳ ಒಳಗೆ ಪಾವತಿಸಲು ಸೂಚಿಸಿದೆ,
ವಿಫಲವಾದಲ್ಲಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಸಿದೆ. ಆಗಸ್ಟ್ 2024ರಲ್ಲಿ ಸೆಬಿ ವಿಧಿಸಿದ ದಂಡವನ್ನು ಪಾವತಿಸಲು ವಿಫಲವಾದ ಕಾರಣ ಈ ನೋಟಿಸ್ ಜಾರಿಯಾಗಿದೆ.