Search
WhatsApp alerts

Home › News

ಲೈಂಗಿಕ ಕಾರ್ಯಕರ್ತೆಯರ ದಿನ 2025: ಅರ್ಥ ಮತ್ತು ಇತಿಹಾಸ

administrator · Published

Sex Workers Day

ಪ್ರತಿ ವರ್ಷ ಜೂನ್ 2ರಂದು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನವನ್ನು (Sex Workers Day) ಆಚರಿಸುತ್ತೇವೆ. ಈ ದಿನದ ಉದ್ದೇಶ ಲೈಂಗಿಕ ಕಾರ್ಯಕರ್ತೆಯರನ್ನು ಗೌರವಿಸುವುದು, ಅವರ ಹಕ್ಕುಗಳನ್ನು ಜಾಗೃತಿ ಮೂಡಿಸುವುದು ಮತ್ತು ಅವರ ವಿರುದ್ಧದ ದಬ್ಬಾಳಿಕೆಯನ್ನು ನಿಲ್ಲಿಸುವುದು.

ಲೈಂಗಿಕ ಕಾರ್ಯಕರ್ತೆಯರು ಸಮಾಜದಲ್ಲಿ ಬಹಳ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರು. ಅವರಿಗೆ ಶೋಷಣೆ, ಸಮಾಜದ ತಿರಸ್ಕಾರವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರ ಆರೋಗ್ಯ, ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಜನರಿಗೆ ತಿಳಿಸಿ ಅವರ ಮಾನವೀಯತೆ ಗಮನಿಸಬೇಕು ಎಂದು ಈ ದಿನವನ್ನು ಗುರುತಿಸಲಾಗುತ್ತದೆ.

ಇತಿಹಾಸ: ಈ ದಿನದ ಆಚರಣೆ 1970ರ ದಶಕದಲ್ಲಿ ಫ್ರಾನ್ಸ್‌ನ ಲಿಯಾನ್ ನಗರದಲ್ಲಿ ಆರಂಭವಾಯಿತು. ಅಂದಿನ ಲೈಂಗಿಕ ಕಾರ್ಯಕರ್ತೆಯರು ಕಾನೂನು ರಕ್ಷಣೆ ಇಲ್ಲದೆ ದಬ್ಬಾಳಿಕೆಗೆ ಒಳಗಾಗುತ್ತಿದ್ದರು. 100ಕ್ಕೂ ಹೆಚ್ಚು ಕಾರ್ಯಕರ್ತೆಯರು ದೊಡ್ಡ ಪ್ರತಿಭಟನೆ ನಡೆಸಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದರು. 1976 ರ ಜೂನ್ 2ರಂದು ಮೊದಲ ಅಂತಾರಾಷ್ಟ್ರೀಯ ದಿನವಾಗಿ ಈ ದಿನವನ್ನು ಗುರುತಿಸಿ ಆಚರಿಸಲು ಆರಂಭಿಸಿದರು.

ಈ ದಿನದ ಮೂಲಕ ಲೈಂಗಿಕ ಕಾರ್ಯಕರ್ತೆಯರ ಆರೋಗ್ಯ, ಸುರಕ್ಷತೆ ಮತ್ತು ಕಾನೂನು ರಕ್ಷಣೆ ಪಡೆಯುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಅವರ ದುಡಿಮೆಯನ್ನು ಮಾನ್ಯತೆ ನೀಡಬೇಕೆಂದು ಒತ್ತಾಯಿಸಲಾಗುತ್ತದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page