HomeKarnatakaNavratri ಮೊದಲನೇ ದಿನ Shailaputri ಪೂಜೆ

Navratri ಮೊದಲನೇ ದಿನ Shailaputri ಪೂಜೆ

- Advertisement -
- Advertisement -

ದೇಶದಲ್ಲಿ ಇಂದಿನಿಂದ ಅದ್ದೂರಿಯಾಗಿ ನವರಾತ್ರಿ ಸಂಭ್ರಮ ಪ್ರಾರಂಭವಾಗುತ್ತದೆ. ನವರಾತ್ರಿಯ ಮೊದಲ ದಿನದ ಪೂಜೆಯನ್ನು ತಾಯಿ ಶೈಲಪತ್ರಿಗೆ ಸಮರ್ಪಿಸಲಾಗುತ್ತದೆ.

ಈ ಒಂಬತ್ತು ದಿನಗಳಲ್ಲಿ ಮಾತೃದೇವತೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ (Navratri) ಮೊದಲ ದಿನವನ್ನು ತಾಯಿ ಶೈಲಪುತ್ರಿಗೆ (Shailaputri) ಸಮರ್ಪಿಸಲಾಗುತ್ತದೆ.

ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ 9 ದಿನಗಳ ಕಾಲ ದೇವಿಗೆ ಸಹ ವಿವಿಧ ಬಣ್ಣದ ಬಟ್ಟೆಗಳಿಂದ ಅಲಂಕಾರ ಮಾಡಲಾಗುತ್ತದೆ. ಹಾಗೆಯೇ, ನಾವು ಸಹ ನಿರ್ದಿಷ್ಟ ಬಣ್ಣದ ಬಟ್ಟೆಗಳನ್ನ ಧರಿಸಿದ್ರೆ ಅದೃಷ್ಟ ಬರುತ್ತದೆ. ಈ ಒಂದೊಂದು ಬಣ್ಣಗಳಿಗೂ ಒಂದೊಂದು ಅರ್ಥವಿದೆ.

ಶೈಲಪುತ್ರಿ ದೇವಿಗೆ ಹಳದಿ ಬಣ್ಣದ ಬಟ್ಟೆ ಮತ್ತು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಬೇಕು. ಪೂಜೆಯ ವೇಳೆ ಓಂ ಶೈಲಪುತ್ರೈ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ ಬಳಿಕ ಅಂತಿಮವಾಗಿ ತಾಯಿಗೆ ಆರತಿಯನ್ನು ಮಾಡಬೇಕು.

ಶೈಲಪುತ್ರಿ ದೇವಿಯ ಆರಾಧನೆಯು ನವರಾತ್ರಿಯ ಮೊದಲ ದಿನದಂದು ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮುಖ್ಯವಾಗಿ ಮಾಡಬೇಕು. ಈಕೆಯ ಆರಾಧನೆಯು ನಮಗೆ ತಾಳ್ಮೆ, ಧೈರ್ಯ ಮತ್ತು ಶಾಂತಿಯ ಮಾರ್ಗವನ್ನು ತೋರಿಸುತ್ತಾಳೆ.

ಆಕೆಯ ಅನುಗ್ರಹದಿಂದ ಸಾಧಕನು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ತೃಪ್ತಿಯನ್ನು ಪಡೆಯುತ್ತಾನೆ. ಶೈಲಪುತ್ರಿ ದೇವಿಯ ಹೆಸರು ಸ್ವತಃ ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಮತ್ತು ಅವಳನ್ನು ಪೂಜಿಸುವುದರಿಂದ ಭಕ್ತನು ಅಪಾರ ಸಂತೋಷ ಮತ್ತು ಶಾಂತಿಯನ್ನು ಪಡೆಯುತ್ತಾನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!