Bengaluru: ರಾಜ್ಯ ಸರ್ಕಾರದ ಜನಪ್ರಿಯ ‘ಶಕ್ತಿ ಯೋಜನೆ’ (Shakti Yojana) ಒಂದು ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಈ ಯೋಜನೆಯಡಿ ಇಂದು 500ನೇ ಕೋಟಿ ಉಚಿತ ಬಸ್ ಟಿಕೆಟ್ ಮಹಿಳಾ ಪ್ರಯಾಣಿಕರಿಗೆ ವಿತರಣೆ ಆಗಲಿದೆ.
2023ರ ಜೂನ್ 11ರಿಂದ ಆರಂಭವಾದ ಈ ಯೋಜನೆಯು ಕಳೆದ 2 ವರ್ಷಗಳ ಅವಧಿಯಲ್ಲಿ, KSRTC, BMTC, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶವನ್ನು ಒದಗಿಸಿದೆ.
ಈಗಾಗಲೇ ಅಂದಾಜು 840 ಕೋಟಿ ಟಿಕೆಟ್‌ಗಳಲ್ಲಿ, 500 ಕೋಟಿ ಟಿಕೆಟ್‌ಗಳನ್ನು ಮಹಿಳೆಯರು ಉಚಿತವಾಗಿ ಪಡೆದು ಪ್ರಯಾಣಿಸಿದ್ದಾರೆ. ಇದರ ಮೌಲ್ಯ ಸುಮಾರು ₹12,600 ಕೋಟಿ.
ಪ್ರತಿ ದಿನ ಸುಮಾರು 80 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದಾಗಿ ಪ್ರವಾಸ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಮಹಿಳಾ ಭೇಟಿ ಸಹ ಹೆಚ್ಚಾಗಿದೆ.
ಬಿಎಂಟಿಸಿಯಲ್ಲಿ ಅತಿದೊಡ್ಡ ಮಹಿಳಾ ಪ್ರಯಾಣಿಕರ ಸಂಖ್ಯೆ (157.33 ಕೋಟಿ ಟಿಕೆಟ್), ನಂತರ ಕೆಎಸ್ಆರ್ಟಿಸಿ (151 ಕೋಟಿ), ವಾಯವ್ಯ ಸಾರಿಗೆ ಸಂಸ್ಥೆ (117 ಕೋಟಿ) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (72 ಕೋಟಿ).
ಉಚಿತ ಟಿಕೆಟ್‌ಗಳ ಮೌಲ್ಯದ ಲೆಕ್ಕದಲ್ಲಿ
- KSRTC: ₹4,786 ಕೋಟಿ
- ವಾಯವ್ಯ ಸಾರಿಗೆ: ₹3,115 ಕೋಟಿ
- ಕಲ್ಯಾಣ ಕರ್ನಾಟಕ: ₹2,521 ಕೋಟಿ
- BMTC: ₹2,169 ಕೋಟಿ
ಈ ವಿಶೇಷ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹಿಳೆಯರಿಗೆ 500ನೇ ಕೋಟಿಯ ಉಚಿತ ಟಿಕೆಟ್ ಹಸ್ತಾಂತರ ಮಾಡಲಿದ್ದಾರೆ. ಜಿಲ್ಲೆಯ ಪ್ರತಿಯೊಂದು ಬಸ್ಸುಗಳನ್ನು ಅಲಂಕರಿಸಿ, ಮಹಿಳೆಯರಿಗೆ ಸಿಹಿ ಮತ್ತು ಹೂ ನೀಡಲಾಗುತ್ತದೆ.