Islamabad: ಪಾಕಿಸ್ತಾನ ಮತ್ತು ಅಮೆರಿಕ (US-Pakistan) ನಡುವೆ ತೈಲ ನಿಕ್ಷೇಪಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಪ್ಪಂದವೊಂದು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ (Pakistani Prime Minister Shehbaz Sharif) “ಐತಿಹಾಸಿಕ” ಎಂದಿದ್ದಾರೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಒಪ್ಪಂದದಿಂದ ಅಮೆರಿಕ ಮತ್ತು ಪಾಕಿಸ್ತಾನ ತೈಲ ಕ್ಷೇತ್ರದಲ್ಲಿ ಸಹಕರಿಸಲಿದ್ದಾರೆ. ಬಹುಶಃ ಭವಿಷ್ಯದಲ್ಲಿ ಪಾಕಿಸ್ತಾನ ಭಾರತಕ್ಕೂ ತೈಲ ರಫ್ತು ಮಾಡಬಹುದು ಎಂದು ಟ್ರಂಪ್ ಹೇಳಿದರು.
ಶರೀಫ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹಣಕಾಸು ಸಚಿವ ಔರಂಗಜೇಬ್ ಮತ್ತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೌರ್ವಡ್ ಲುಟ್ನಿಕ್, ರಾಯಭಾರಿ ಜೇಮಿಸನ್ ಗ್ರೀರ್ ಈ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ್ದರು.
ಈ ಒಪ್ಪಂದದಿಂದ ಪಾಕಿಸ್ತಾನದಿಂದ ಅಮೆರಿಕಗೆ ರಫ್ತಾಗುವ ವಸ್ತುಗಳ ಮೇಲಿನ ಸುಂಕ ಕಡಿಮೆಯಾಗಲಿದೆ. ಜೊತೆಗೆ ಇಂಧನ, ಖನಿಜ, ಐಟಿ ಮತ್ತು ಕ್ರಿಪ್ಟೋಕರೆನ್ಸಿ ಕ್ಷೇತ್ರಗಳಲ್ಲಿ ಸಹಕಾರವೂ ಹೆಚ್ಚಲಿದೆ.