Islamabad: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು ಭಾರತ ವಿರುದ್ಧ ಪ್ರತಿಕ್ರಿಯೆ ಸೂಚಿಸಿದ ನಂತರ ಪಾಕಿಸ್ತಾನದಲ್ಲಿ ಅವರ ವಿರುದ್ಧ ಗರಂ ಆಕ್ರೋಶ ವ್ಯಕ್ತವಾಗಿದೆ. ಭಾರತೀಯ ಸೇನೆ ಪಾಕಿಸ್ತಾನದ PoK ಹಾಗೂ ಪಂಜಾಬ್ ಪ್ರದೇಶದಲ್ಲಿ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿ 9 ಕಡೆಗಳಲ್ಲಿ ದಾಳಿ ನಡೆಸಿದ ನಂತರ, ಶೆಹಬಾಜ್ ಷರೀಫ್ ಪ್ರತೀಕಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಆದರೆ, ಶೆಹಬಾಜ್ ಅವರ ನಿಧಾನಗತಿಯಲ್ಲಿ ನಡೆಯುವ ಭಾಷಣದಿಂದ ಅನೇಕ ಪಾಕಿಸ್ತಾನಿ ನಾಗರಿಕರು ಕೋಪಗೊಂಡಿದ್ದಾರೆ. ಕೆಲವರು ಅವರು “ದುರ್ಬಲ ಮತ್ತು ಆತ್ಮವಿಶ್ವಾಸದ ಕೊರತೆ” ಹೊಂದಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ. “ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಮುಗಿಯುತ್ತದೆ” ಎಂದು ಟೀಕಿಸಲಾಗಿದೆ.
ಪಾಕಿಸ್ತಾನಿ ಬಳಕೆದಾರರು ಶೆಹಬಾಜ್ ಅವರ ನಿಧಾನಗತಿಯ ಭಾಷಣವನ್ನು ಹಾಸ್ಯವಾಗಿ ಟೀಕಿಸಿ, “ಅಂಕಲ್ ದಯವಿಟ್ಟು ಸ್ವಲ್ಪ ವೇಗವಾಗಿ ಮಾತನಾಡಿ” ಎಂದು ಹೇಳಿದ್ದಾರೆ. ಮತ್ತೊಬ್ಬರು “ಅವರ ಭಾಷಣ ಮುಗಿಯುವುದಾದರೆ ಯುದ್ಧ ಕೊನೆಗೊಳ್ಳಬಹುದು” ಎಂದು ವಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭಾರತ ಪ್ರತೀಕಾರ ತೀರಿಸದಿದ್ದರೂ, ಪಾಕಿಸ್ತಾನ ಪ್ರತೀಕಾರ ಮಾಡಿದರೆ ಮತ್ತೊಂದು ದಾಳಿಯನ್ನು ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.