back to top
22.4 C
Bengaluru
Tuesday, October 7, 2025
HomeBusinessOla, Uber ಪ್ರಯಾಣಿಕರಿಗೆ ಶಾಕ್: ಸರ್ಜ್ ಪ್ರೈಸಿಂಗ್‌ಗೆ Government ಅನುಮತಿ

Ola, Uber ಪ್ರಯಾಣಿಕರಿಗೆ ಶಾಕ್: ಸರ್ಜ್ ಪ್ರೈಸಿಂಗ್‌ಗೆ Government ಅನುಮತಿ

- Advertisement -
- Advertisement -

ಓಲಾ, ಊಬರ್ (Ola, Uber) ಹಾಗೂ ಇತರ ಕ್ಯಾಬ್ ಸೇವಾ ಪ್ಲ್ಯಾಟ್‌ಫಾರ್ಮ್‌ಗಳಿಗೆ ಭಾರಿ ಬದಲಾವಣೆ! ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳಂತೆ, ಈಗ ಸರ್ಜ್ ಪ್ರೈಸಿಂಗ್ (ಅಥವಾ ಡೈನಮಿಕ್ ದರ) ಇಚ್ಛೆಯಂತೆ ಏರಿಸಲು ಅಥವಾ ಇಳಿಸಲು ಅನುಮತಿ ನೀಡಲಾಗಿದೆ.

  • ಸರ್ಜ್ ಪ್ರೈಸಿಂಗ್ಗೆ ಅನುಮತಿ
  • ಕ್ಯಾಬ್‌ಗಳಿಗೆ ಬೇಡಿಕೆ ಕಡಿಮೆಯಿದ್ದರೆ, ದರವನ್ನು 50% ಕಡಿಮೆ ಮಾಡಬಹುದು.
  • ಪೀಕ್ ಅವರ್ಸ್‌ನಲ್ಲಾದರೆ, ದರವನ್ನು 2 ಪಟ್ಟು ಹೆಚ್ಚು ಮಾಡಬಹುದು.
  • ಉದಾಹರಣೆ
  • ಮೂಲ ದರ: 3 ಕಿಮೀಗೆ ₹60
  • ಪೀಕ್ ಅವರ್ಸ್‌ನಲ್ಲಿ: ₹120 ವರೆಗೆ ಆಗಬಹುದು
  • ಪ್ರತಿ ಕಿಮೀ ₹20 ದರವೂ ದುಪ್ಪಟ್ಟು ಆಗಬಹುದು
  • ಬೈಕ್ ಟ್ಯಾಕ್ಸಿಗೆ ಹಸಿರು ನಿಶಾನೆ
  • ಖಾಸಗಿ ಬೈಕ್‌ಗಳನ್ನು ಟ್ಯಾಕ್ಸಿಯಾಗಿ ಬಳಸಲು ಅನುಮತಿ
  • ಈ ಸೇವೆಗೆ ಅನುಮತಿ ನೀಡುವುದು ರಾಜ್ಯ ಸರ್ಕಾರದ ಕೈಯಲ್ಲಿ
  • ಚಾಲಕರಿಗೆ ನಿರ್ಬಂಧ ಮತ್ತು ತರಬೇತಿ
  • ಎಲ್ಲಾ ಚಾಲಕರಿಗೆ ಪೊಲೀಸ್ ಪರಿಶೀಲನೆ ಕಡ್ಡಾಯ
  • ಕಣ್ಣಿನ ಹಾಗೂ ದೈಹಿಕ/ಮಾನಸಿಕ ಆರೋಗ್ಯ ತಪಾಸಣೆ ಕಡ್ಡಾಯ
  • 10 ಲಕ್ಷ ಟರ್ಮ್ ಇನ್ಸೂರೆನ್ಸ್ + 5 ಲಕ್ಷ ಹೆಲ್ತ್ ಇನ್ಸೂರೆನ್ಸ್ ಕಡ್ಡಾಯ
  • ಚಾಲಕರಿಗೆ ಕನಿಷ್ಠ 40 ಗಂಟೆಗಳ ತರಬೇತಿ ಕಡ್ಡಾಯ
  • ಆ್ಯಪ್ ಆಧಾರಿತ ಸೇವೆ ಕಡ್ಡಾಯ
  • ಲೈವ್ ಟ್ರ್ಯಾಕಿಂಗ್, ಪ್ಯಾನಿಕ್ ಬಟನ್, ಡ್ರೈವರ್ ರೇಟಿಂಗ್ ಇತ್ಯಾದಿ ಅವಶ್ಯಕ
  • ಇಂಗ್ಲಿಷ್/ಹಿಂದಿ/ಸ್ಥಳೀಯ ಭಾಷೆಗಳಲ್ಲಿ ಆ್ಯಪ್ ಇಂಟರ್ಫೇಸ್ ಇರಬೇಕು
  • ಸೈಬರ್ ಸೆಕ್ಯೂರಿಟಿ ನಿಯಮ ಪಾಲನೆ ಅಗತ್ಯ
  • ವಾಹನ ಮಾಲೀಕರಿಗೆ ಲಾಭ
  • ಡ್ರೈವರ್‌ಗಿಂತ ವಾಹನ ಅವರದೇ ಇದ್ದರೆ, ದರದ ಕನಿಷ್ಠ 80% ಅವರಿಗೇ
  • ಅಗ್ರಿಗೇಟರ್ ಕಂಪನಿಯ ವಾಹನವಿದ್ದರೆ, ಡ್ರೈವರ್‌ಗೆ ಕನಿಷ್ಠ 60
  • ಪರವಾನಗಿ ಹಾಗೂ ಶುಲ್ಕಗಳು
  • ಹೊಸ ಪರವಾನಿಗೆ: ₹5 ಲಕ್ಷ
  • ಲೈಸೆನ್ಸ್ ನವೀಕರಣ: ₹25,000
  • 100 ಬಸ್ಸು ಅಥವಾ 1,000 ವಾಹನಗಳ ಸೇವೆ ನೀಡುವ ಕಂಪನಿಗೆ ₹10 ಲಕ್ಷ ಸೆಕ್ಯೂರಿಟಿ ಡೆಪಾಸಿಟ್
  • ವಿಕಲಚೇತನ ಸ್ನೇಹಿ ವಾಹನಗಳ ಕುರಿತು
  • ಎಷ್ಟು ವಾಹನಗಳು ವಿಶೇಷ ಅಗತ್ಯವಿರುವವರಿಗೆ ಸೂಕ್ತವಾಗಿರಬೇಕು ಎಂಬುದನ್ನು ರಾಜ್ಯ ಸರ್ಕಾರ ನಿಗದಿ ಮಾಡಲಿದೆ.

ಈ ಹೊಸ ಮಾರ್ಗಸೂಚಿಗಳಿಂದಾಗಿ ಓಲಾ, ಊಬರ್ ಪ್ರಯಾಣಿಕರಿಗೆ ದರದ ಏರಿಕೆ ಅಚ್ಚರಿ ನೀಡಬಹುದು. ಆದರೆ ಚಾಲಕರ ಕಲ್ಯಾಣ ಹಾಗೂ ಸೇವೆಯ ಗುಣಮಟ್ಟದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ ಎಂದು ಸರ್ಕಾರ ಹೇಳಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page