Search
WhatsApp alerts

Home › News

ವಾಷಿಂಗ್ಟನ್‌ನಲ್ಲಿ Free Palestine Rally ವೇಳೆ ಗುಂಡಿನ ದಾಳಿ: ಇಬ್ಬರು Israeli Embassy Staff ಹತ್ಯೆ

administrator · Published

Shooting at Washington Free Palestine rally: Two Israeli embassy staff killed

ವಾಷಿಂಗ್ಟನ್ ಡಿಸಿ ನಗರದ ಯಹೂದಿ ವಸ್ತುಸಂಗ್ರಹಾಲಯದ ಬಳಿ ಬುಧವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ.

ಒಬ್ಬ ದುಷ್ಕರ್ಮಿ “ಫ್ರೀ ಪ್ಯಾಲೆಸ್ತೀನ್” ಎಂದು ಘೋಷಣೆ ಕೂಗುತ್ತಾ ಗುಂಡು ಹಾರಿಸಿದ್ದಾನೆ. ಈ ಘಟನೆ ಯುಎಸ್ ಯಹೂದಿ ಸಮಿತಿಯ ವಾರ್ಷಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನಡೆದಿದೆ. ದಾಳಿ ನಂತರ ಶಂಕಿತ ವ್ಯಕ್ತಿ ನೀರು ಹಾಗೂ ಸುರಕ್ಷಿತ ಸ್ಥಳ ಕೇಳಿದಾನೆ, ಬಳಿಕ ಪೊಲೀಸರೊಂದಿಗೆ ಹೋಗುವಾಗ ಮತ್ತೆ “ಫ್ರೀ ಪ್ಯಾಲೆಸ್ತೀನ್” ಎಂದು ಕೂಗಿದ್ದಾನೆ.

ಇದು ಯೆಹೂದಿಗಳಿಗೆ ವಿರುದ್ಧವಾದ ಭಯೋತ್ಪಾದನೆಯಾಗಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳ ಗುರುತು ಅಥವಾ ಶಂಕಿತನ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಮತ್ತು ಯುಎಸ್ ಅಟಾರ್ನಿ ಜೀನೈನ್ ಪಿರೋ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಸ್ರೇಲಿ ರಾಯಭಾರ ಸಿಬ್ಬಂದಿಗೆ ಈ ರೀತಿಯ ಹತ್ಯೆಯು ಅಮೆರಿಕಾದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ದಾಳಿಯ ಸ್ಥಳವು ಎಫ್‌ಬಿಐ ಕಚೇರಿಯಿಂದ ದೂರವಿಲ್ಲ, ಪ್ರಕರಣದ ತನಿಖೆ ಮುಂದುವರಿದಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page