ಶ್ರೇಯಸ್ ಅಯ್ಯರ್ (Shreyas Iyer) ಕೊನೆಯ ಬಾರಿ ಭಾರತ ಪರ ಟಿ20 ಪಂದ್ಯವಾಡಿದ್ದು 2023ರಲ್ಲಿ. 2024ರಲ್ಲಿ ಟೆಸ್ಟ್ ತಂಡದಲ್ಲೂ ಕಾಣಿಸಿಕೊಂಡಿದ್ದರು. ಅದರ ಬಳಿಕ ಎರಡೂ ಫಾರ್ಮ್ಯಾಟ್ ಗಳಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಈ ಬಾರಿ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರೂ ನಿರಾಸೆಯಾಗಿತ್ತು. ಆದರೆ ಈಗ ಅಯ್ಯರ್‌ಗೆ ನಾಯಕತ್ವದ ಬಗ್ಗೆ ಬಿಸಿಸಿಐ ಯೋಚನೆ ನಡೆಸುತ್ತಿದೆ ಎಂಬ ವರದಿ ಬಂದಿದೆ.
ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಶ್ರೇಯಸ್ ಅಯ್ಯರ್ ಅವರನ್ನು ಏಕದಿನ ತಂಡದ ನಾಯಕನಾಗಿ ಪರಿಗಣಿಸಲಾಗಿದೆ. 2027ರ ಏಕದಿನ ವಿಶ್ವಕಪ್‌ಗಾಗಿ ನಾಯಕತ್ವ ಬದಲಾವಣೆ ಮಾಡುವ ಸಾಧ್ಯತೆಯಿದೆ.
ಮುಂಬರುವ ದಿನಗಳಲ್ಲಿ ಟೆಸ್ಟ್ ಮತ್ತು ಟಿ20 ತಂಡಗಳನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. 2026ರ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಸ್ಥಾನಕ್ಕೆ ಗಿಲ್ ನಾಯಕರಾಗಲಿದ್ದಾರೆ.
ವರ್ಕ್ಲೋಡ್ ನಿರ್ವಹಣೆಗಾಗಿ ಏಕದಿನ ತಂಡದ ನಾಯಕತ್ವವನ್ನು ಗಿಲ್ ಅವರಿಗೆ ನೀಡದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಅದೇ ಕಾರಣದಿಂದಾಗಿ ಏಷ್ಯಾಕಪ್‌ಗೆ ಅವರನ್ನು ಉಪನಾಯಕನಾಗಿ ಘೋಷಿಸಲಾಗಿದೆ.
ಹೀಗಾಗಿ, ರೋಹಿತ್ ಶರ್ಮಾ ಬಳಿಕ ಭಾರತ ಏಕದಿನ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುವ ಸಾಧ್ಯತೆ ಗಟ್ಟಿಯಾಗುತ್ತಿದೆ.