back to top
25.3 C
Bengaluru
Monday, July 14, 2025
HomeNewsಭೂಮಿಗೆ ಮರಳುತ್ತಿರುವ Shubhash Shukla: ಇಂದು Undocking, ನಾಳೆ Splashdown

ಭೂಮಿಗೆ ಮರಳುತ್ತಿರುವ Shubhash Shukla: ಇಂದು Undocking, ನಾಳೆ Splashdown

- Advertisement -
- Advertisement -

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳು ಉಳಿದು ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಅವರು ಜುಲೈ 15 ರಂದು ತಮ್ಮ ತಂಡದ ಸದಸ್ಯರೊಂದಿಗೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಬಾಹ್ಯಾಕಾಶ ನೌಕೆಯಿಂದ ಇಳಿಯಲಿದ್ದಾರೆ.

Undocking ಮತ್ತು splashdown: ಶುಭಾಂಶು ಮತ್ತು ಅವರ ಮೂವರು ಸಹ ಗಗನಯಾತ್ರಿಗಳು ಜುಲೈ 14 ರಂದು ಮಧ್ಯಾಹ್ನ 2:25ಕ್ಕೆ ಬಾಹ್ಯಾಕಾಶ ನೌಕೆಗೆ ಏರುತ್ತಾರೆ. ನಂತರ ಸಂಜೆ 4:35ಕ್ಕೆ ಸ್ಪೇಸ್ಎಕ್ಸ್‌ನ ಡ್ರ್ಯಾಗನ್ ನೌಕೆ ISS ಬೇರ್ಪಡಿಸುತ್ತದೆ (Undocking). ನೌಕೆ ಅನೇಕ ಗಂಟೆಗಳ ಬಾಹ್ಯಾಕಾಶ ಪ್ರಯಾಣದ ಬಳಿಕ ಜುಲೈ 15 ರಂದು ಮಧ್ಯಾಹ್ನ 3 ಗಂಟೆಗೆ ಭೂಮಿಗೆ ಇಳಿಯುವ ನಿರೀಕ್ಷೆಯಿದೆ.

ಶುಭಾಂಶು ISS ನಲ್ಲಿ ಭಾರತಕ್ಕೆ ಸಂಬಂಧಿಸಿದ 7 ಮಹತ್ವದ ಪ್ರಯೋಗಗಳನ್ನು ನಡೆಸಿದ್ದಾರೆ. ಇದರಲ್ಲಿ ಸ್ನಾಯು ಹಾನಿ ಕುರಿತು ಸಂಶೋಧನೆ, ಬ್ರೈನ್-ಕಂಪ್ಯೂಟರ್ ಸಂಪರ್ಕಗಳ ಅಭಿವೃದ್ಧಿ ಮತ್ತು ಹೆಸರುಕಾಳು–ಮೆಂತ್ಯದ ಮೊಳಕೆಯ ಮೇಲಿನ ಪ್ರಯೋಗಗಳಿವೆ.

ಶುಭಾಂಶು ಐಎಸ್ಎಸ್‌ಗೆ ಹೋಗಿದ ಮೊದಲ ಭಾರತೀಯ ಹಾಗೂ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ. ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ 1984ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು. ಅವರ ಮಾತು ಉಲ್ಲೇಖಿಸಿ, ಶುಭಾಂಶು “ಇಂದಿಗೂ ‘ಸಾರೆ ಜಹಾನ್ ಸೆ ಅಚ್ಛಾ’ ಎಂಬುದು ಸತ್ಯ” ಎಂದು ನುಡಿದರು.

ಭೂಮಿಗೆ ಮರಳಿದ ಬಳಿಕ, ಶುಭಾಂಶು ಮತ್ತು ತಂಡದ ಸದಸ್ಯರು ಏಳು ದಿನಗಳ ಪುನರ್ವಸತಿ ತಪಾಸಣೆಗೆ ಒಳಪಡುವರು. ಭೂಮಿಯ ಗುರ್ತ್ವಾಕರ್ಷಣೆಗೆ ದೇಹ ಹೊಂದಿಕೊಳ್ಳಲು ಫ್ಲೈಟ್ ಸರ್ಜನ್ ಮಾರ್ಗದರ್ಶನದಲ್ಲಿ ವಾಸ್ತವಿಕ ತರಬೇತಿ ನೀಡಲಾಗುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page