Delhi: ರಾಷ್ಟ್ರೀಯ ಕುಡಗೋಲು ಕಣ (Sickle Cell Disease) ಮಿಷನ್ ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಭಾರತದೆಲ್ಲೆಡೆ 6 ಕೋಟಿ ಜನರಲ್ಲಿ ತಪಾಸಣೆ ನಡೆಸಿದೆ. ಈ ತಪಾಸಣೆಯ ವೇಳೆ 2.15 ಲಕ್ಷ ಜನರಿಗೆ ಕುಡಗೋಲು ಕಣ ರೋಗ (Sickle Cell Disease – SCD) ಇರುವುದಾಗಿ ಪತ್ತೆಯಾಗಿದೆ. ಜೊತೆಗೆ, 16.7 ಲಕ್ಷ ಜನರು ಈ ಕಾಯಿಲೆಯ ವಾಹಕರು (carrier) ಆಗಿರುವುದು ದೃಢಪಟ್ಟಿದೆ.
ರಾಜ್ಯ ಸರ್ಕಾರಗಳು ಸುಮಾರು 2.6 ಕೋಟಿ ಜನರಿಗೆ ಆರೋಗ್ಯ ಕಾರ್ಡ್‌ಗಳು ವಿತರಿಸಿವೆ. ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹೆಚ್ಚು ಶೇಕಡಾವಾರು ತಪಾಸಣೆ ಮಾಡಿ ಉತ್ತಮ ಪ್ರಗತಿಯನ್ನು ತೋರಿಸಿವೆ. ಒಡಿಶಾ, ಛತ್ತೀಸ್ಗಢ, ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಈ ರೋಗದ ಪ್ರಕರಣಗಳು ಹೆಚ್ಚು ವರದಿಯಾಗಿವೆ.
- ಸ್ಕ್ರೀನಿಂಗ್‌ಗೆ ತ್ವರಿತ ಫಲಿತಾಂಶ ನೀಡುವ ಪಿಒಸಿಟಿ ಕಿಟ್‌ಗಳನ್ನು ಬಳಸಲಾಗುತ್ತಿದೆ.
- ಎಲ್ಲ ರಾಜ್ಯಗಳ ಡೇಟಾ ಕ್ರೋಢೀಕರಿಸಲು ವಿಶೇಷ ಪೋರ್ಟಲ್ ಸ್ಥಾಪಿಸಲಾಗಿದೆ.
- ಪೀಡಿತರಿಗೆ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡುವುದು ಮುಂದಿನ ಗುರಿ.
ಈ ರಾಷ್ಟ್ರೀಯ ಮಿಷನ್ ಅನ್ನು 2023 ಜುಲೈ 1ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, 2047ರೊಳಗೆ ಈ ರೋಗವನ್ನು ಭಾರತದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿದೆ.
ಕುಡಗೋಲು ಕಣ ರೋಗ ಸ್ವರೂಪ: ಇದು ರಕ್ತದ ಕೆಂಪು ಕಣಗಳು ಸಾಮಾನ್ಯವಾಗಿ ಇರುವ ದುಂಡು ಆಕಾರ ಬದಲು, ಕುಡಗೋಲು ಅಥವಾ ಅರ್ಧಚಂದ್ರಾಕಾರದ ಆಕಾರದಲ್ಲಿ ಕಾಣಿಸುತ್ತವೆ. ಈ ರೀತಿ ಬದಲಾಗಿದೆ ಎಂಬುದು Sickle Cell ಎಂಬ ಹೆಸರಿನ ಕಾರಣ.
ಯಾಕೆ ತೊಂದರೆ ಆಗುತ್ತೆ: ಈ ಕುಡಗೋಲು ಆಕಾರದ ರಕ್ತಕಣಗಳು ಗಟ್ಟಿಯಾಗಿ ಸಿಲುಕಿಕೊಳ್ಳುತ್ತವೆ, ರಕ್ತಸಂಚಾರಕ್ಕೆ ತೊಂದರೆ ಉಂಟುಮಾಡುತ್ತವೆ.
- ಇದರಿಂದಾಗಿ, ತೀವ್ರ ನೋವು
- ಅಂಗಾಂಗ ಹಾನಿ
- ಶಕ್ತಿಯ ಕೊರತೆ
- ಆಮ್ಲಜನಕ ಸರಿಯಾಗಿ ಸರಬರಾಜು ಆಗದೆ ರಕ್ತಹೀನತೆ ಆಗುತ್ತದೆ.
ಇದು ವಂಶಪಾರಂಪರ್ಯ ರೋಗ. ಪೋಷಕರಿಂದ ಮಗುವಿಗೆ ಜೀನ್ಸ್ ಮೂಲಕ ಬರುತ್ತದೆ. ಇಬ್ಬರು ಪೋಷಕರೂ ರೋಗದ ಜೀನ್ ಹೊಂದಿದ್ದರೆ, ಮಗುವಿಗೆ ಸಿಡಿ ಸೋಂಕು ಹೆಚ್ಚು ಸಾಧ್ಯ.
ರಕ್ತಹೀನತೆ ಲಕ್ಷಣಗಳು
- ಚರ್ಮ, ತುಟಿಗಳ ಬಿಳಿ ಬಣ್ಣ
- ಉಸಿರಾಟದ ತೊಂದರೆ
- ತಲೆತಿರುಗು
- ನಿದಾನವಾದ ಬೆಳವಣಿಗೆ
- ಹೃದಯ ಬಡಿತ ವೇಗವಾಗುವುದು
ಕುಡಗೋಲು ಕಣ ರೋಗವು ಗಂಭೀರವಾದ ಆರೋಗ್ಯ ಸಮಸ್ಯೆ. ಆದರೆ ಸರಿಯಾದ ಸಮಯದಲ್ಲಿ ತಪಾಸಣೆ, ಪರಿಹಾರ ಮತ್ತು ಜಾಗೃತಿ ಮೂಲಕ ಇದರ ಪರಿಣಾಮ ಕಡಿಮೆ ಮಾಡಬಹುದು. ಸರ್ಕಾರದ ಮಿಷನ್ ಮುಂದಿನ ದಿನಗಳಲ್ಲಿ ಇದನ್ನು ಸಮೂಲವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿದೆ.