Bengaluru: ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 13ಕ್ಕೆ ತಮ್ಮ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಈ ಅಪರೂಪದ ಆಹ್ವಾನ ಕೆಲವರಿಗೆ ಆಶ್ಚರ್ಯಕರವಾಗಿದೆ. ಕಾಂಗ್ರೆಸ್ ಳಗೆ “ಯಾರ ಕುರ್ಚಿ ಉಳಿಯುತ್ತದೆ, ಯಾರ ಕುರ್ಚಿ ಹೋಗಬಹುದು” ಎಂಬ ಚರ್ಚೆಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ಸಂಭವನೀಯ ಸಂಪುಟ ಪುನಾರಚನೆಯ ವಿಚಾರವೂ ಪಕ್ಷದಲ್ಲಿ ಚರ್ಚೆಯ ವಿಷಯವಾಗಿದೆ.
ಮುಂದಿನ ಡಿನ್ನರ್ ಸಭೆಗೆ ಸಿದ್ದರಾಮಯ್ಯ ಮುನ್ನಡೆಸಿದ ಸುಮಾರು 2 ಗಂಟೆಗಳ ಸಭೆಯಲ್ಲಿ ಅತ್ಯಾಪ್ತ ಸಚಿವರ ಜೊತೆ ರಾಜ್ಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ,
- ನಾಯಕತ್ವ ಬದಲಾವಣೆಗೆ ಪ್ರತಿತಂತ್ರಗಳ ಬಗ್ಗೆ ಚರ್ಚೆ
- ಸರ್ಕಾರ ನಿರ್ವಹಣೆ ಮತ್ತು ಕ್ಷಿಪ್ರ ಬೆಳವಣಿಗೆಗೆ ತಂತ್ರಗಳ ವಿಚಾರ
- ರಾಜಕೀಯ ಎದುರಾಳಿಗಳ ಕಾರ್ಯಚಟುವಟಿಕೆಗಳಿಗೆ ಪ್ರತಿತಂತ್ರ ಹೇಗೆ ಹಿಡಿಯಬೇಕು ಎಂಬ ಚರ್ಚೆ
- ಸಂಪುಟ ವಿಸ್ತರಣೆ, ಲಾಭ-ನಷ್ಟ ಹಾಗೂ ಶಾಸಕರ ನಿರ್ವಹಣೆ ವಿಚಾರಗಳನ್ನು ಸಮಾಲೋಚನೆ
ಈ ಸಭೆಯ ಮೂಲಕ ಸಿದ್ದರಾಮಯ್ಯ ಪಕ್ಷದ ಮಂತ್ರಿಗಳು ಮತ್ತು ಶಾಸಕರನ್ನು ಸೆಳೆದುಕೊಂಡು, ಸಂಪುಟ ಪುನಾರಚನೆ ವೇಳೆ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.