back to top
21.4 C
Bengaluru
Friday, October 10, 2025
HomeChikkaballapuraSidlaghattaಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಹೊಸ ಸಮಿತಿ ಆಯ್ಕೆ

ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಹೊಸ ಸಮಿತಿ ಆಯ್ಕೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಪ್ರಮುಖರು ಶಿಡ್ಲಘಟ್ಟ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆ ಸೇರಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಶಿಡ್ಲಘಟ್ಟ ತಾಲ್ಲೂಕು ಹೊಸ ಸಮಿತಿಯನ್ನು ಆಯ್ಕೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಸ್ಥಾಪನೆಯಾದ ಈ ಸಂಘಟನೆ ನಿರೀಕ್ಷೆಯಂತೆ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹಳೆಯ ಸಮಿತಿಯನ್ನು ರದ್ದುಗೊಳಿಸಿ, ಹೊಸ ತಂಡವನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ನೆಲಮಂಗಲ ಮಧುಸೂದನ್, ಕಾರ್ಯಾಧ್ಯಕ್ಷ ಮಧುಸೂದನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಲಕ್ಷ್ಮಣ್, ಖಜಾಂಚಿ ಮಡಿಕೇರಿ ಪೊನ್ನಪ್ಪ ಹಾಗೂ ಸಹ ಕಾರ್ಯದರ್ಶಿ ವೆಂಕಟೇಶ್. ಎಚ್.ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದು, ಇವರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಶಿಡ್ಲಘಟ್ಟ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಶೆಟ್ಟಹಳ್ಳಿ ದೇವಕೃಷ್ಣಪ್ಪ ಅವರು ತಾಲ್ಲೂಕು ಅಧ್ಯಕ್ಷರಾಗಿ, ಭಕ್ತರಹಳ್ಳಿ ಕೋಟೆ ಚೆನ್ನೇಗೌಡ ಗೌರವಾಧ್ಯಕ್ಷರಾಗಿ, ದೊಣ್ಣಹಳ್ಳಿ ರಮೇಶ್ ಉಪಾಧ್ಯಕ್ಷರಾಗಿ, ಎಸ್.ಎಂ. ರವಿಪ್ರಕಾಶ್ ಪ್ರಧಾನ ಕಾರ್ಯದರ್ಶಿಯಾಗಿ, ದೇವೇನಹಳ್ಳಿ ನಂಜೇಗೌಡ ಕಾರ್ಯದರ್ಶಿಯಾಗಿ, ದೊಣ್ಣಹಳ್ಳಿ ಕಿಶೋರ್ ಕುಮಾರ್ ಖಜಾಂಚಿಯಾಗಿ, ಜಯಂತಿ ಗ್ರಾಮ ಬೈರೇಗೌಡ, ಚೌಡಸಂದ್ರ ಶ್ರೀನಿವಾಸ್ ಮತ್ತು ಲೋಕೇಶ್ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಬಿ.ಕೆ. ಮುನಿ ಕೆಂಪಣ್ಣ, ಚೌಡಸಂದ್ರ ಶ್ರೀಧರ್, ಶೆಟ್ಟಹಳ್ಳಿ ಮುನಿರಾಜು ಹಾಗೂ ನಾಗರಾಜ್ ನೇಮಕಗೊಂಡರು.

ರಾಜ್ಯಾಧ್ಯಕ್ಷ ಮಧುಸೂದನ್ ಮಾತನಾಡಿ, ಒಕ್ಕಲಿಗ ಸಮುದಾಯ ಇಂದು ಸಂಘಟಿತರಾಗಿ ಹೋರಾಟ ಮಾಡುವ ಅಗತ್ಯವಿದೆ. ಹೊಸ ಕಮಿಟಿ ಸದೃಢವಾಗಿ ಕಾರ್ಯ ನಿರ್ವಹಿಸಿ ಸಮುದಾಯದ ಹಕ್ಕು, ಕಲ್ಯಾಣ ಹಾಗೂ ಒಗ್ಗಟ್ಟು ಕಾಪಾಡಬೇಕು ಎಂದು ಹೇಳಿದ ಅವರು ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿದೆ ಎಂದರು.

ನೂತನ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಶೆಟ್ಟಹಳ್ಳಿ ದೇವಕೃಷ್ಣಪ್ಪ ಅವರು ಮಾತನಾಡಿ, “ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲೂ ಸಮಿತಿಯನ್ನು ಬಲಪಡಿಸಲಾಗುವುದು. ಹೆಚ್ಚಿನ ಸದಸ್ಯರನ್ನು ಸೇರಿಸಿ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಸಂಘಟನೆ ಮುಂಚೂಣಿಯಲ್ಲಿರಲಿದೆ. ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಂ. ರವಿಪ್ರಕಾಶ್ ಮಾತನಾಡಿ, ನೂತನ ತಂಡ ಗ್ರಾಮಮಟ್ಟದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವತ್ತ ಗಮನ ಹರಿಸುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉದ್ಯೋಗಾವಕಾಶ, ಹಕ್ಕುಗಳ ರಕ್ಷಣೆ ಮೊದಲಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.

ಸಭೆಯಲ್ಲಿ ಎಲ್ಲ ಹೊಸ ಪದಾಧಿಕಾರಿಗಳು ಸಂಘಟನೆಯ ಯಶಸ್ಸಿಗೆ ಸಂಪೂರ್ಣ ಬದ್ಧರಾಗಿರುವುದಾಗಿ ಘೋಷಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page