back to top
22.4 C
Bengaluru
Wednesday, July 2, 2025
HomeKarnatakaChikkaballapuraಸಮತಾ ಸೈನಿಕ ದಳ ಪಧಾದಿಕಾರಿಗಳ ಆಯ್ಕೆ

ಸಮತಾ ಸೈನಿಕ ದಳ ಪಧಾದಿಕಾರಿಗಳ ಆಯ್ಕೆ

- Advertisement -
- Advertisement -

Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು (Mallur) ಗ್ರಾಮದ ಶ್ರೀ ಕೈವಾರ ತಾತಯ್ಯನವರ ದೇವಾಲಯದ ಆವರಣದಲ್ಲಿ ಸಮತಾ ಸೈನಿಕ ದಳದ ಮಳ್ಳೂರು ಗ್ರಾಮ ಪಂಚಾಯಿತಿ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮತಾ ಸೈನಿಕ ದಳದ (Samata Sainika Dala) ತಾಲ್ಲೂಕಿನ ಅಧ್ಯಕ್ಷ ಈಧರೆ ಪ್ರಕಾಶ್ ಮಾತನಾಡಿದರು.

ದೇಶದ ಪ್ರತಿಯೊಬ್ಬ ಪ್ರಜೆಯೂ ಉತ್ತಮ ಶಿಕ್ಷಣ ಪಡೆಯುವುದು ಸೇರಿದಂತೆ ಸಮಾನತೆಯಿಂದ ಬದುಕಲು ಬೇಕಾದ ಹಕ್ಕುಗಳನ್ನು ನೀಡಿದಂತಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಯಾವುದೋ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ವಿಶ್ವದ ಅಗ್ರಗಣ್ಯ ನಾಯರಲ್ಲಿ ಒಬ್ಬರಾಗಿದ್ದು ಪ್ರತಿಯೊಂದು ಸಮುದಾಯದ ಜನತೆಗೆ ಮತದಾನದ ಹಕ್ಕು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಹಿಂದಿನ ರಾಜ ಮನೆತನದ ಆಳ್ವಿಕೆಯನ್ನು ಕೊನಗಾಣಿಸಿzರು. ಅಂತಹ ಮಹಾನ್ ವ್ಯಕ್ತಿಯ ತತ್ವ, ಆದರ್ಶಗಳನ್ನು ದೇಶದ ಪ್ರತಿಯೊಬ್ಬ ನಾಗರೀಕರೂ ಮೈಗೂಡಿಸಿಕೊಳ್ಳಬೇಕು ಎಂದರು.

ಮಳ್ಳೂರು ಗ್ರಾಮ ಪಂಚಾಯಿತಿ ಶಾಖೆ ಪಧಾದಿಕಾರಿಗಳು

ಮಳ್ಳೂರು ಗ್ರಾಮ ಪಂಚಾಯಿತಿ ಶಾಖೆಯ ಗೌರವಾಧ್ಯಕ್ಷರಾಗಿ ಮುನಿಕೃಷ್ಣಪ್ಪ, ಅಧ್ಯಕ್ಷರಾಗಿ ವಿನಯ್, ಪ್ರಧಾನಕಾರ್ಯದರ್ಶಿ ವಿಶ್ವನಾಥ್, ಕಾರ್ಯಾಧ್ಯಕ್ಷ ದ್ಯಾವಪ್ಪ, ಖಜಾಂಚಿ ನರೇಶ್, ಉಪಾಧ್ಯಕ್ಷರಾಗಿ ಕಾಚಹಳ್ಳಿ ಮುನಿಯಪ್ಪ ಶ್ರೀನಿವಾಸ್, ಮಳ್ಳೂರು ಕದಿರಪ್ಪ, ಗಂಗಾಧರ್, ಕಾರ್ಯಾಧ್ಯಕ್ಷರಾಗಿ ಮುನಿಹನುಮಪ್ಪ, ಕೃಷ್ಣಪ್ಪ, ನಿತೀನ್, ಜಂಗಮಕೋಟೆ ಹೋಬಳಿ ಶಾಖೆ ಸದಸ್ಯರಾಗಿ ಗಂಗನಹಳ್ಳಿ ಡಿ. ದ್ಯಾವಪ್ಪ, ನರಸಿಂಹಮೂರ್ತಿ, ಚಿಕ್ಕದ್ಯಾವಪ್ಪ ರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮತಾ ಸೈನಿಕ ದಳ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಜೆ.ವೆಂಕಟಾಪುರ ನಾಗರತ್ನಮ್ಮ, ಜಂಗಮಕೋಟೆ ಹೋಬಳಿ ಅಧ್ಯಕ್ಷ ಮುನಿರಾಜು, ಗೌರವಾಧ್ಯಕ್ಷ ಮಳ್ಳೂರು ವೆಂಕಟರಾಮಪ್ಪ, ಮಹೇಶ್, ಮಳ್ಳೂರು ಪ್ರಭಾಕರ್ ಮತ್ತಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

You cannot copy content of this page